Site icon PowerTV

ಲಿಫ್ಟ್‌ನಲ್ಲಿ ಬಾಲಕನ ಮೇಲೆ ಸಾಕು ನಾಯಿ ದಾಳಿ, ಆಘಾತಕಾರಿ ವಿಡಿಯೋ ವೈರಲ್​.!

ಉತ್ತರ ಪ್ರದೇಶ: ಇಲ್ಲಿನ ಗಾಜಿಯಾಬಾದ್‌ನ ಬಹುಮಹಡಿ ಕಟ್ಟಡಯೊಂದರ ಲಿಫ್ಟ್‌ನಲ್ಲಿ ಸಾಕು ನಾಯಿಯೊಂದು ಪುಟ್ಟ ಬಾಲಕನ ಕಚ್ಚಿದ ಭಯಂಕರ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಗಾಜಿಯಾಬಾದ್‌ ರಾಜನಗರದ ಚಾರ್ಮ್ಸ್ ಕ್ಯಾಸಲ್ ಸೊಸೈಟಿಯಲ್ಲಿ ನಿನ್ನೆ ನಡೆದಿದೆ. ಲಿಫ್ಟ್‌ನಲ್ಲಿ ನಾಯಿಯ ಮಾಲೀಕರು ನೋಡ ನೋಡುತ್ತಿದ್ದಂತೆಯೇ ಮಗುವಿನ ಮೇಲೆ ಎರಗಿ ಕಚ್ಚುತ್ತಿರುವುದನ್ನ ಇಲ್ಲಿ ಕಾಣಬಹುದು.

ಸಾಕು ನಾಯಿಯೊಂದು ಲಿಫ್ಟ್‌ನಲ್ಲಿ ಮಗುವನ್ನು ಕಚ್ಚುತ್ತದೆ, ಸಾಕು ಮಾಲೀಕರು ಮಗು ನೋವಿನಿಂದ ಬಳಲುತ್ತಿರುವಾಗಲೂ ಸಾಕು ಮಾಲೀಕರು ಗಮನಿಸದೇ ತಮ್ಮ ನಿರ್ಲಕ್ಷತನ ಪ್ರದರ್ಶಿಸಿದ್ದಾರೆ. ಇನ್ನು ಮಗುವಿನ ಮೇಳೆ ನಾಯಿ ದಾಳಿ ಘಟನೆ ಬಗ್ಗೆ ಯಾರೂ ನೋಡದ ಕಾರಣ ಮಾನವೀಯತೆ ಎಲ್ಲಿದೆ ಎಂದು ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡು ಆಕಾಶ್ ಅಶೋಕ್ ಗುಪ್ತಾ ತಮ್ಮ ಟ್ವೀಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಘಟನೆ ನಂತರ ಲಿಫ್ಟ್‌ನಲ್ಲಿ ಬಾಲಕ ನಿಂತಿದ್ದ ವೇಳೆ ವಯಸ್ಸಾದ ಮಹಿಳೆ ತನ್ನ ಮುದ್ದಿನ ನಾಯಿಯೊಂದಿಗೆ  ಲಿಫ್ಟ್​ನಿಂದ ಕಾಲ್ಕಿತ್ತಿರುವುದನ್ನ ನೋಡಬಹುದು.

Exit mobile version