Site icon PowerTV

ನೀರಿನ ರಭಸಕ್ಕೆ ಕೊಚ್ಚಿ ಹೋಗಿ 20ಕ್ಕೂ ಹೆಚ್ಚು ಕುರಿ ಸಾವು.!

ಗದಗ: ನಿನ್ನೆ ಸುರಿದ ಭಾರೀ ಮಳೆಗೆ 20 ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳು, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನೀಲಗುಂದ ಗ್ರಾಮದ ದೊಡ್ಡಹಳ್ಳಕ್ಕೆ ಹೊಂದಿಕೊಂಡ ರಸ್ತೆಯಲ್ಲಿ ನಡೆದಿದೆ.

ಇನ್ನೂ ಹತ್ತಕ್ಕಿಂತಲೂ ಹೆಚ್ಚು ಕುರಿಗಳು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಇವರೆಗೂ ಪತ್ತೆಯಾಗಿಲ್ಲ. ಪಕ್ಕದ ಕಲ್ಲೂರ ಗ್ರಾಮದ ಹನಮಪ್ಪ ದೊಡ್ಡಮನಿ ಅನ್ನೋರಿಗೆ ಈ ಕುರಿಗಳು ಸೇರಿದ್ದು ನೀಲಗುಂದದಿಂದ ಕೋಳಿವಾಡ ಮಾರ್ಗದ ರಸ್ತೆಯಲ್ಲಿ ಈ ಕುರಿಗಳನ್ನ ಮಳೆ ಬಂದ ಹಿನ್ನಲೆ ನಿಲ್ಲಿಸಲಾಗಿತ್ತು.‌

ಮಧ್ಯರಾತ್ರಿ‌ 2-30 ರ ಸುಮಾರಿಗೆ ಪಕ್ಕದ ಜಮೀನಿನಿಂದ ಏಕಾಏಕಿ ಮಳೆನೀರಿನ ಪ್ರವಾಹ ಬಂದಿದ್ದರಿಂದ ಕುರಿಗಳೆಲ್ಲ ಕೊಚ್ಚಿಹೋದವು. ಕೈಗೆ ಸಿಕ್ಕ ಕುರಿಗಳನ್ನಷ್ಟೇ ಬಚಾವ್ ಮಾಡಿಕೊಂಡು,‌ ನಾವೂ ಸಹ ಬದುಕಿದೆವು ಎಂದು ಕುರಿಗಾಯಿಗಳು ಹೇಳಿದರು.

ಒಟ್ಟು ಮೂವತ್ತಕ್ಕಿ‌ಂತಲೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ಕುರಿಗಾಯಿಗಳು ಸರ್ಕಾರದ‌ ಪರಿಹಾರಕ್ಕೆ ಎದುರು ನೋಡ್ತಿದ್ದಾರೆ.

Exit mobile version