Site icon PowerTV

ವರುಣರಾಯನ ರೌದ್ರ ನರ್ತನದಿಂದ ಜನಜೀವನ ಅಸ್ತವ್ಯಸ್ತ

ಗದಗ : ಜಿಲ್ಲೆಯಲ್ಲೂ ಮಳೆಯ ಆರ್ಭಟ ಮುಂದುವರೆದಿದೆ. ಗದಗನ ಗಂಗಿಮಡಿ, ಅಂಬೇಡ್ಕರ್ ಕಾಲೋನಿ, ಎಸ್.ಎಮ್ ಕೃಷ್ಣಾ ನಗರ, ಜನತಾ ಕಾಲೋನಿ, ಕಮ್ಮಾರ ಕಾಲೋನಿ, ಬೆಟಗೇರಿ, ವಾಂಬೆ ಬಡಾವಣೆ, ಭಜಂತ್ರಿ ಕಾಲೋನಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಮನೆ‌ ಮಂದಿಯಲ್ಲಾ ರಾತ್ರಿವಿಡಿ ಜಾಗರಣೆ ಮಾಡುವಂತಾಗಿದೆ. ಅನೇಕ ಗೃಹೋಪಯೋಗಿ ವಸ್ತುಗಳು, ದವಸ ಧಾನ್ಯಗಳು ನೀರಲ್ಲಿ ಮುಳುಗಡೆ ಆಗಿವೆ. ಇನ್ನು ಜಿಲ್ಲೆಯ ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ರೋಣ, ಶಿರಹಟ್ಟಿ ತಾಲೂಕಿನ ಭಾಗದಲ್ಲೂ ಬಾರಿ ಮಳೆ ಸುರಿಯುತ್ತಿದೆ. ರಸ್ತೆಗಳೆಲ್ಲಾ ನದಿಗಳಂತಾಗಿವೆ. ಹೀಗೆ ಜಿಲ್ಲೆಯ ಅನೇಕ‌ ಕಡೆಗಳಲ್ಲಿ ವರುಣರಾಯನ ರೌದ್ರ ನರ್ತನದಿಂದ ಜನಜೀವನ ಅಸ್ತವ್ಯಸ್ತವಾಗಿದೆ.

Exit mobile version