Site icon PowerTV

ಹಾಸ್ಟೆಲ್ ಮುಳುಗಡೆ, 160 ಕ್ಕೂ ಅಧಿಕ ಮಕ್ಕಳ ವ್ಯಾಸಂಗ ಅಸ್ತವ್ಯಸ್ತ

ಗದಗ: ನಿನ್ನೆ ತಡರಾತ್ರಿ ಸುರಿದ ಮಳೆಗೆ ಜಿಲ್ಲೆಯಲ್ಲೂ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಗದಗನ ಹಾತಲಗೇರಿ ರಸ್ತೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ.

160 ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡ್ತಿದ್ದು, ವಿದ್ಯಾರ್ಥಿಗಳ ದಾಖಲಾತಿಗಳು, ಪುಸ್ತಕಗಳು, ಕಾಟ್, ಬೆಡ್, ಬಟ್ಟೆಗಳೆಲ್ಲಾ ನೀರಲ್ಲಿ ಮುಳುಗಡೆ ಆಗಿವೆ. ಹಾಸ್ಟೆಲ್ ನ ಅಡುಗೆ ಸಾಮಗ್ರಿಗಳು ನೀರಲ್ಲಿ ತೇಲಾಡಿವೆ. ಮಳೆಯಿಂದ ವಿದ್ಯಾರ್ಥಿಗಳು ರಾತ್ರಿವಿಡಿ ಪರದಾಡಿದ್ದಾರೆ.

ಪದವಿ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನಲೆ, ಹಾಲ್ ಟಿಕೇಟ್, ಪುಸ್ತಕಗಳು ಹಾನಿಯಾಗಿವೆ.‌ ಹಾಸ್ಟೆಲ್ ನ ಅಡುಗೆ ಸಾಮಗ್ರಿಗಳು ನೀರಲ್ಲಿ‌ ಮುಳುಗಡೆ ಆಗಿದ್ದು, ವಿದ್ಯಾರ್ಥಿಗಳು ಊಟ, ಉಪಹಾರಕ್ಕೂ ಪರದಾಡುವಂತಾಗಿದೆ.

ನೀರು ಹಾಸ್ಟೇಲ್​ಗೆ ನುಗ್ಗಿದ್ದರಿಂದ ಬಿಲ್ಡಿಂಗ್ ಕರೆಂಟ್ ಅರ್ಥ್ ಆಗುತ್ತಿದ್ದು, ಏನಾದ್ರು ಅನಾಹುತ ನಡೆದ್ರೆ ಯಾರು ಹೊಣೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Exit mobile version