Site icon PowerTV

ಧಾರಾಕಾರ ಮಳೆಯಿಂದ ಭಾರೀ ಅನಾಹುತ

ಬೆಂಗಳೂರು : ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಭಾರೀ ಅನಾಹುತಗಳು ಸಂಭವಿಸಿವೆ. ನಗರದ ಕಾವಲ್‌ ಭೈರಸಂದ್ರದಲ್ಲಿ ಮೂರು ಮನೆಗಳ ಗೋಡೆ ಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ವಾಗಿಲ್ಲ.

ಗೋಡೆ ಕುಸಿತಕ್ಕೆ 5 ದ್ವಿಚಕ್ರವಾಹನ, ಎರಡು ಬೈಸಿಕಲ್ ನೆಲಸಮವಾಗಿದ್ದು, ಮನೆಯಲ್ಲಿದ್ದ ದಿನಸಿ ವಸ್ತುಗಳು ಕೂಡ ಜಲಮಯವಾಗಿವೆ‌. ಆದ್ರೆ, ಯಾರದ್ದೋ ಮನೆ ಬಿದ್ದಿರೋದ್ರಿಂದ ಮತ್ಯಾರದ್ದೂ ಮನೆಗೆ ದಿಗ್ಬಂಧನವಾಗಿದೆ. ಇನ್ನೂ ಯಶವಂತಪುರದ ಮತ್ತಿಕೆರೆಯಲ್ಲಿರುವ ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದ್ದು, ಕಾಲೇಜಿನ ಕಾಂಪೌಂಡ್ ಹಾಳಾಗಿದ್ದು, ಮರದ ಕೆಳಗೆ ಪಾಕ್೯ ಮಾಡಿದ್ದ ಮೂರು ಕಾರುಗಳು ಕೂಡ ಜಖಂಗೊಂಡಿವೆ.

Exit mobile version