ಬೆಂಗಳೂರು: ತಮ್ಮ ಕ್ಷೇತ್ರದ ಗಣೇಶ್ ಉತ್ಸವದಲ್ಲಿ ಭಾಗವಹಿಸಿ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ವಿಶೇಷ ಪೂಜೆ ಸಲ್ಲಿಸಿ ನಮಸ್ಕರಿಸಿದ್ದಾರೆ.

ಅಖಿಲ ಕರ್ನಾಟಕ ಜಮೀರ್ ಅಹ್ಮದ್ ಖಾನ್ ಅಭಿಮಾನಿಗಳ ಒಕ್ಕೂಟ ಆರೋಜಿಸಿದ್ದ ಅದ್ಧೂರಿ ಗಣೇಶ್ ಉತ್ಸವದಲ್ಲಿ ಭಾಗವಹಿಸಿ ಜಮೀರ್ ಅಹ್ಮದ್ ಖಾನ್ ಭಾವೈಕ್ಯತೆ ಮೆರೆದಿದ್ದಾರೆ.
ಚಾಮರಾಜಪೇಟೆಯಲ್ಲಿ ಬರುತವ ಶಾಸಕ ಜಮೀರ್ ಅಹಮದ್ ಕಚೇರಿಯಲ್ಲಿ ಈ ಗಣೇಶ್ ಉತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಜತೆಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




