Site icon PowerTV

ಶಿವರಾಮ್ ಹೆಬ್ಬಾರ್ ಕಾಣೆ, ಹುಡುಕಿಕೊಟ್ಟವರಿಗೆ ಬಹುಮಾನ

ಹಾವೇರಿ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಕಾಣೆಯಾಗಿದ್ದಾರೆ ಎಂದು ರಾಣೆಬೆನ್ನೂರಿನಲ್ಲಿ ರೈತ ಮುಖಂಡರ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಮನೆ, ಬೆಳೆ, ಬದುಕು ಕಳೆದುಕೊಂಡು ಕಂಗಾಲಾಗಿರೋ ಜನರ ಕಷ್ಟವನ್ನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಇಲ್ಲಿವರೆಗೂ ಕೇಳಿಲ್ಲ ಎಂದು ರಾಣೆಬೆನ್ನೂರಿನ ರೈತ ಮುಖಂಡರು ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರೂ ಜಿಲ್ಲೆಯ ಕಷ್ಟವನ್ನ ಆಲಿಸಿಲ್ಲ. ಹೀಗಾಗಿ ಕಾಣೆಯಾಗಿರೋ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಎಂದು ರೈತ ಮುಖಂಡರು ಬರೆದ ಪತ್ರ ವೈರಲ್ ಆಗಿದೆ.

ಅಲ್ಲದೇ, ಉಸ್ತುವಾರಿ ಸಚಿವರ ಕಾಣುತ್ತಿಲ್ಲ ಈ ಬಗ್ಗೆ ಸ್ವ ಜಿಲ್ಲೆಯವರಾದ ಸಿಎಂ ಬೊಮ್ಮಾಯಿ ಅವರು ಮಾತನಾಡಬೇಕು ಎಂದು ರಾಣೆಬೆನ್ನೂರಿನ ರೈತ ಮುಖಂಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version