Site icon PowerTV

ಇಂದಿರಾ ಕ್ಯಾಂಟೀನ್, ಕಲ್ಯಾಣ ಮಂಟಪ, ದೇಗುಲವನ್ನೂ ಬಿಡದ ವರುಣ

ಚಾಮರಾಜನಗರ : ಒಂದು ರಾತ್ರಿಯ ಮಳೆಗೆ ಚಾಮರಾಜನಗರ ಸ್ಥಿತಿ ಅಯೋಮಯವಾಗಿದ್ದು ಎಲ್ಲೆಡೆ ನೋಡಿದರೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು ಚಾಮರಾಜನಗರ ಜಿಲ್ಲಾ ಕೇಂದ್ರ ಸೇರಿದಂತೆ ಚಾಮರಾಜನಗರ ತಾಲೂಕು ಮಳೆಗೆ ತತ್ತರಿಸಿದೆ.

ನಗರದ ಬಿ‌.ರಾಚಯ್ಯ ಜೋಡಿರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ನೀರು ನುಗ್ಗಿದ್ದು 4 ಅಡಿ ನೀರು ನಿಂತಿದ್ದು ಇಂದಿರಾ ಕ್ಯಾಂಟೀನ್​​ಗೆ ಯಾರೂ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ.

ಇನ್ನು, ನಗರದ ಸತ್ಯಮಂಗಲಂ ರಸ್ತೆಯಲ್ಲಿ‌ರುವ ಕಲ್ಯಾಣ ಮಂಟಪವೊಂದಕ್ಕೆ ನದಿಯಂತೆ ನೀರು ಹರಿದಿದ್ದು ಮದುವೆಮನೆ ನೀರಿನ ಮನೆಯಾಗಿ ಬದಲಾಗಿದೆ. ಅಡುಗೆ ಕೋಣೆಗೆ ನೀರು ನುಗ್ಗಿ ತರಕಾರಿಗಳೆಲ್ಲಾ ತೇಲುತ್ತಿರುವ ದೃಶ್ಯ ಸೆರೆಯಾಗಿದ್ದು ಮೊಣಕಾಲುದ್ದ ನೀರಿನಲ್ಲಿ ಬಾಣಸಿಗರು ಅಸಹಾಯಕರಾಗಿ ನಿಂತಿದ್ದಾರೆ. ಅಟ್ಟಗುಳಿಪುರ ಗ್ರಾಮದವರ ಮದುವೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

Exit mobile version