Site icon PowerTV

CET ರ‍್ಯಾಂಕಿಂಗ್‌ ಕುರಿತು ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು : ಹೌದು, ಕಳೆದ ಜುಲೈ 30ರಂದು 2021-2022ರ ಸಿಇಟಿ ಫಲಿತಾಂಶ ಹೊರಬಂತು. ಈ ಫಲಿತಾಂಶದಲ್ಲಿ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಶಾಕ್ ಆಗಿತ್ತು. ಫ್ರೆಶರ್ಸ್​ಗೆ ಒಂದು ನ್ಯಾಯ, ರಿಪೀಟರ್ಸ್​ಗೆ ಮತ್ತೊಂದು ನ್ಯಾಯ ಸಿಕ್ಕಿತ್ತು. ಹೀಗಾಗಿ 25 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ರು.

ಹೈಕೋರ್ಟ್ ಶನಿವಾರ ಮರುಪರೀಕ್ಷೆ ಬರೆದ ಅಭ್ಯರ್ಥಿಗಳ ಪ್ರಸಕ್ತ ಸಾಲಿನ ಸಿಇಟಿ ಅಂಕಗಳ ಜೊತೆ ಕಳೆದ 2020-21ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ಕೆಇಎಗೆ ನಿರ್ದೇಶನ ನೀಡಿದೆ. ಮರು ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಪಿಯು ಪರೀಕ್ಷೆಯ ಶೇ.50 ಅಂಕ ಹಾಗೂ ಸಿಇಟಿಯಲ್ಲಿ ಪಡೆದಿರುವ ಶೇ. 50 ಅಂಕ ಪರಿಗಣಿಸಿ ಹೊಸದಾಗಿ ರ‍್ಯಾಂಕ್‌ ಪಟ್ಟಿ ಪ್ರಕಟಿಸುವಂತೆ ಆದೇಶಿಸಿದೆ.

ಇದರಿಂದ ಸದ್ಯ ರಿಪೀಟರ್ಸ್ ವಿದ್ಯಾರ್ಥಿಗಳು ಹಾಗೂ ಪೋಷಕರು ನಿಟ್ಟಿಸಿರು ಬಿಟ್ಟಿದ್ದಾರೆ. ನ್ಯಾಯಾಲಯದ ಈ ತೀರ್ಪಿನಿಂದ 2020-21ರ ಸಾಲಿನ ಸುಮಾರು 21 ಸಾವಿರ ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅದೇ ರೀತಿ 2021-2022ರ ಸಾಲಿನ ಸಿಇಟಿ ರ‍್ಯಾಂಕಿಂಗ್‌ನಲ್ಲಿ ಭಾರೀ ಏರುಪೇರಾಗುವ ಸಾಧ್ಯತೆಯಿದೆ. ಸದ್ಯ ಇನ್ನು ಕೂಡ ವೆರಿಫಿಕೇಷನ್ ಹಂತದಲ್ಲಿರುವುದರಿಂದ ರ‍್ಯಾಂಕಿಂಗ್ ಬದಲಾವಣೆ ಆದ್ರೂ ಕೂಡ ಕೌನ್ಸೆಲಿಂಗ್ ಎಲ್ಲಾ ಸರಿ ಹೋಗುವ ವಿಶ್ವಾಸದಲ್ಲಿ ವಿದ್ಯಾರ್ಥಿಗಳು ಇದ್ದಾರೆ.

ಒಟ್ಟಾರೆ ಕೆಇಎ ಮಾಡಿರುವಂತಹ ಎಡವಟ್ಟಿಗೆ ಹೈಕೋರ್ಟ್ ತಕ್ಕ ಪಾಠ ಕಲಿಸಿದೆ. ಕೆಇಎ ಬೋರ್ಡ್ ನ್ಯಾಯ ಸಮ್ಮತವಾಗಿ ರ‍್ಯಾಂಕ್ ಕೊಟ್ಟಿಲ್ಲ ಅಂತ ತಿಳಿಸಿ, ಪ್ರೆಶಸ್ ರೀತಿಯಲ್ಲಿ ಫಲಿತಾಂಶ ಪ್ರಕಟಿಸಲು ಆದೇಶಿಸಿದೆ. ಇದರಿಂದ ಮತ್ತೆ ಎಲ್ಲಾ ವಿದ್ಯಾರ್ಥಿಗಳ ರ‍್ಯಾಂಕ್ ಬದಲಾಗುವ ಸಾಧ್ಯತೆ ಇದೆ. ಒಂದು ವೇಳೆ ರ‍್ಯಾಂಕ್ ಬದಲಾದ್ರೆ ಮತ್ತೆ ವಿವಾದ ಸೃಷ್ಟಿಯಾಗೋದಂತೂ ಪಕ್ಕ .

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಪವರ್ ಟಿವಿ ಬೆಂಗಳೂರು

Exit mobile version