Site icon PowerTV

ಮುರುಘಾ ಶ್ರೀಗಳ ವಿರುದ್ಧ ತೊಡೆ ತಟ್ಟಿದ ಬಸವರಾಜನ್​​ಗೆ ಮತ್ತೊಂದು ಸಂಕಷ್ಟ

ಚಿತ್ರದುರ್ಗ : ಬಾಲಿಕಿಯನ್ನು ತಮ್ಮ ಬಳಿ ಬಿಡಲು ವಿದ್ಯಾಭ್ಯಾಸ, ಮದುವೆ ಖರ್ಚು ನೀಡುವುಡಾಗಿ ಆಮಿಷ ಒಡ್ಡಿದ್ದರು ಎಂದು ಬಾಲಕಿ ಚಿಕ್ಕಪ್ಪ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜನ್ ಹೇಳಿದ್ದು ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ ಅಂತ ಆದರೆ ಅದು ಸುಳ್ಳು. ಅಜ್ಜಪ್ಪ ಎನ್ನುವರು ನನ್ನನ್ನು ಯಾಮರಿಸಿ ನನಗೆ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಮಗಳನ್ನು ಕರೆದುಕೊಂಡು ಬಂದು ಸೌಭಾಗ್ಯ ಬಸವರಾಜ್ ಸಹಿ ಮಾಡಿಸಿಕೊಂಡಿದ್ದರು ಎಂದರು.

ಅದಲ್ಲದೇ, ಬಾಲಿಕಿಯನ್ನು ತಮ್ಮ ಬಳಿ ಬಿಡಲು ವಿದ್ಯಾಭ್ಯಾಸ, ಮದುವೆ ಖರ್ಚು ನೀಡುವುಡಾಗಿ ಆಮಿಷ ಒಡ್ಡಿದ್ದರು. ತದನಂತರ ಮಾಧ್ಯಮದ ಮೂಲಕ ನೋಡಿದಾಗ ಮುರುಘಾ ಶ್ರೀಗಳ ಬಗ್ಗೆ ದೂರು ಬಂದಿಯುವುದು ಗೊತ್ತಾಗಿದೆ. ಶ್ರೀಗಳ ವಿರುದ್ಧ ಬಸವರಾಜನ್ ,ಸೌಭಾಗ್ಯ ಪಿತೂರಿ ನಡೆಸಿದ್ದಾರೆ ಎಂದು ಆರೋಪ ಮಾಡಿದ ಸಂತ್ರಸ್ತ ಬಾಲಕಿ ಚಿಕ್ಕಪ್ಪ ನಿನ್ನೆ ‌ದೂರು ನೀಡಿದ್ದಾರೆ.

Exit mobile version