Site icon PowerTV

ಕೆರೆ ಕಟ್ಟೆ ಒಡೆದು ರಸ್ತೆ ಸಂಪರ್ಕ ಕಡಿತ

ಗದಗ: ಜಿಲ್ಲೆಯಲ್ಲಿ ಬೆಂಬಿಡದೆ ವರುಣನ ಆರ್ಭಟ ಮುಂದುವರೆದಿದ್ದು, ಅದರಂತೆ ವರುಣನ ನರ್ತನಕ್ಕೆ ಕೆರೆ ಕಟ್ಟೆ ಒಡೆದಿದ್ದು, ಕೆರೆಯ ನೀರೆಲ್ಲ ರಸ್ತೆ ಮೇಲೆ ಹರಿದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಗೇರಿ ಗ್ರಾಮದಲ್ಲಿ ಬರುವ ಕೆರೆ ಕಟ್ಟೆ ಒಡೆದಿದ್ದು, ಇದರಿಂದ ಶಿರಹಟ್ಟಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದ್ರಿಂದಾಗಿ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಸಂಪರ್ಕ ಕಡಿತವಾದರು ಸಹ ಹರಿಯುವ ನೀರಲ್ಲಿ ವಾಹನ ಸವಾರರು ರಸ್ತೆ ದಾಟಿದರು.

Exit mobile version