Site icon PowerTV

ಅನಾಥಸೇವಾಶ್ರಮ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ

ಚಿತ್ರದುರ್ಗ: ಲೈಂಗಿಕ ಆರೋಪದ ಮೇಲೆ ಬಂಧನವಾಗಿರುವ ಮುರುಘಾ ಶ್ರೀ ಅವರನ್ನ ಅನಾಥಸೇವಾಶ್ರಮ ವಿಶ್ವಸ್ತ ಸಮಿತಿಯಿಂದ ಮುರುಘಾ ಶ್ರೀ ಅವರನ್ನ ಅಧಿಕೃತವಾಗಿ ವಜಾ ಮಾಡಲಾಗಿದೆ.

ಮೈಸೂರಿನ ಮಲ್ಲಾಡಿಹಳ್ಳಿಯ ಆಶ್ರಮದ ಅಧೀನದಲ್ಲಿರುವ ಅನಾಥಸೇವಾಶ್ರಮ ಅದೀನದಲ್ಲಿರುವ ಗುರುಕುಲ ಪಿಯು ಕಾಲೇಜಿನ ಸಭೆಯಲ್ಲಿ ಒಮ್ಮತದಿಂದ ಶ್ರೀಗಳನ್ನ ವಜಾಗೊಳಿಸಲಾಗಿದೆ.

ಪೋಕ್ಸೋ ಕಾಯ್ದೆಯಡಿ ಮುರುಘಾ ಶ್ರೀ ಬಂಧನವಾಗಿದ್ದು, ಈ ತಕ್ಷಣದಿಂದ ಜಾರಿಗೆ ಬರುವಂತೆ ಅನಾಥಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಹಾಗೂ ಸದಸ್ಯ ಸ್ಥಾನದಿಂದ ವಜಾಗೊಳಿಸಿ ಸಮಿತಿಯ ಗೌರವ ಕಾರ್ಯದರ್ಶಿ ಕೆ.ಇ ರಾಧಾಕೃಷ್ಣ ಪ್ರಕಟನೆ ಹೊರಡಿಸಿದ್ದಾರೆ.

Exit mobile version