Site icon PowerTV

ಮುರುಘಾ ಶ್ರೀ ಬಗ್ಗೆ ಯಡಿಯೂರಪ್ಪ, ವಿಜಯೇಂದ್ರಗೆ ಕೇಳಿ: ಬಸನಗೌಡ ಯತ್ನಾಳ್

ವಿಜಯಪುರ: ಮುರುಘಾ ಶ್ರೀಗಳ ಬಗ್ಗೆಯೂ ನಾನು ಪ್ರತಿಕ್ರಿಯೆ ನೀಡಲ್ಲ. ಮುರುಘಾ ಶ್ರೀಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಬಿವೈ ವಿಜಯೇಂದ್ರಗೆ ಕೇಳಿ ಎಂದು ಮುರುಘಾ ಮಠದ ಶರಣರು ಬಂಧನಕ್ಕೆ ಹಾಗೂ ಆರೋಗ್ಯದಲ್ಲಿ ಏರುಪೇರು ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದಾರೆ.

ಇನ್ನು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಹಿಳೆ ಮೇಲೆ ದರ್ಪ ವಿಚಾರವಾಗಿ ಮಾತನಾಡಿ, ನಾನು ನೋಡಿಲ್ಲ, ನಾನು ಕಣ್ಣಿನಿಂದ ಮಾಧ್ಯಮಗಳಲ್ಲೂ ನೋಡಿದ್ರೆ ಪ್ರತಿಕ್ರಿಯೆ ಕೊಡುತ್ತೇನೆ ಎಂದರು.

ಬಿ.ಎಸ್ ಯಡಿಯೂರಪ್ಪ ಕುರಿತು ರಾಜಾಹುಲಿ ಅಂತ ಸುದ್ದಿ ಹೊಡೆಯುತ್ತಿರಿ. ಮಾಧ್ಯಮದವರು ಯಾವುದು ಬಿಡ್ತಿರಿ. ರಾಜಾಹುಲಿ ಚಪ್ಪಾಳೆ ಹೊಡೆದ್ರೂ ಅಂತ ಇಡೀ ದಿನ ಸುದ್ದಿ ಹೊಡಿತಿರಿ. ಬಿ ಎಸ್ ಯಡಿಯೂರಪ್ಪ ಬಗ್ಗೆ ರಾಜಾಹುಲಿ ಎಂದು ಯತ್ನಾಳ್ ವ್ಯಂಗ್ಯವಾಡಿದರು.

Exit mobile version