Site icon PowerTV

ಕರೆಂಟ್​ ತಡವಾಗಿ ಹಾಕಿದ್ದಕ್ಕೆ ಕೆಇಬಿ ಆಪರೇಟರ್ ಮೇಲೆ ಹಲ್ಲೆ

ವಿಜಯಪುರ: ಕೆಇಬಿ ಆಪರೇಟರ್ ಮೇಲೆ ಹಲ್ಲೆಗೈದ ಘಟನೆ ವಿಜಯಪುರ ತಾಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿದೆ.

ರಾಜು ಹರಿಜನ ಹಲ್ಲೆಗೊಳಗಾದ ಕೆಇಬಿ ಆಪರೇಟರ್, ವಿದ್ಯುತ್ ವಿತರಣೆ ವಿಳಂಬ ಮಾಡಿದ್ದಕ್ಕೆ ಕೆಇಬಿ ಆಪರೇಟರ್​ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲೆಗೆ ಕಲ್ಲಿನಿಂದ ಹೊಡೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಹಲ್ಲೆ ಮಾಡಿರುವ ವಿಡಿಯೋ ಸ್ಥಳೀಯರ ಮೊಬೈಲ್ ಸೆರೆಯಾಗಿದ್ದು, ಹೊನ್ನುಟಗಿಗೆ ಹೋಗಿ ನಿನ್ನೆ ತಡರಾತ್ರಿ ಕರ್ತವ್ಯದಲ್ಲಿದ್ದ ಕೆಇಬಿ ಆಪರೇಟರ್‌ಗೆ ಮದಭಾವಿ ಗ್ರಾಮದ ಕೆಲವು ಕಿಡಿಗೇಡಿಗಳು ಹೋಗಿ ಕರೆಂಟ್ ತಡ ಮಾಡಿ ಹಾಕಿದ್ದೀಯಾ ಎಂದು ಜಗಳದಲ್ಲಿ ಆಪರೇಟರ್ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ. ಸದ್ಯ ಕೆಇಬಿ ಆಪರೇಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Exit mobile version