Site icon PowerTV

ವಿಜಯಪುರ: ಗಣೇಶೋತ್ಸವ ಮಂಟಪ ಕುಸಿತ, 60 ಕ್ಕೂ ಹೆಚ್ಚು ಜನರು ಪಾರು.!

ವಿಜಯಪುರ: ಗಣೇಶೋತ್ಸವ ಹಬ್ಬಕ್ಕಾಗಿ ನಿರ್ಮಿಸಿದ್ದ ಅಲಂಕೃತಗೊಂಡಿದ್ದ ಗಣೇಶ ಮಂಟಪಯೊಂದು ನೆಲಕ್ಕುರುಳಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದ ಬಳಿ ನಡೆದಿದೆ.

ಜನ ಜಂಗುಳಿಯ ಭಾರ ತಾಳಲಾರದೆ ಅಲಂಕೃತಗೊಂಡಿದ್ದ ಗಣೇಶ ಮಂಟಪ ಕುಸಿದಿದೆ. ಸುಮಾರು 60 ಕ್ಕೂ ಹೆಚ್ಚು ಜನತೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಹಿಳೆಯರಿಗೆ, ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಒಂದೇ ಸಲಕ್ಕೆ ಕುಸಿದು ಬಿದ್ದ ಅಲಂಕೃತ ಮಂಟಪಕ್ಕೆ ಸದ್ಯ ಸ್ಥಳಕ್ಕೆ ನಗರ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಜನರನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಸಿಂದಗಿ ಶಾಸಕ ರಮೇಶ ಭೂಸನೂರ ಅವರು ಭೇಟಿ ನೀಡಿದ್ದಾರೆ.

Exit mobile version