Site icon PowerTV

ಮನವಿ ನೀಡಲು ಬಂದಿದ್ದ ಮಹಿಳೆ ಮೇಲೆ ದರ್ಪ ತೋರಿದ ಅರವಿಂದ ಲಿಂಬಾವಳಿ

ಬೆಂಗಳೂರು: ಮನವಿ ನೀಡಲು ಬಂದ ಮಹಿಳೆ ಮೇಲೆ ಬಿಜೆಪಿ ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಸಚಿವರ ದರ್ಪಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಹಿಳೆಯೊಬ್ಬರು ಶಾಸಕರಿಗೆ ಬಳಿಗೆ ಬಂದು ಕಾಗದ ಹಿಡಿದು ಮನವಿ ಪತ್ರ ನೀಡಲು ಬಂದ ವೇಳೆ, ಅರವಿಂದ ಲಿಂಬಾವಳಿ ಇದ್ದಕ್ಕಿದ್ದ ಹಾಗೆ ಮಹಿಳೆ ಕೈಯಲ್ಲಿದ್ದ ಮನವಿ ಪತ್ರ ಕಸಿಕೊಂಡು ಹರಿದು ಹಾಕುತ್ತಾರೆ.

ವರ್ತೂರು ಕೆರೆಯ ಕೆಲವು ಕಡೆ ಒತ್ತುವರೆ ಮಾಡಲಾಗಿದೆ ಎಂದು ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದೀಯಾ, ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ದರ್ಪ ತೋರಿದ್ದಾರೆ. ನಂತರ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಅಲ್ಲಿದ್ದ ಪೊಲೀಸರಿಗೆ ಅರವಿಂದ್ ಲಿಂಬಾವಳಿ ತಾಕೀತು ಮಾಡಿದ್ದಾರೆ.

ಅರವಿಂದ್ ಲಿಂಬಾವಳಿ ಅವರು ಇತ್ತೀಚೆಗೆ ಆದ ಮಳೆ ಹಾನಿ ಬಗ್ಗೆ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಲು ತೆರಳಿದ ವೇಳೆಯಲ್ಲಿ ಘಟನೆ ನಡೆದಿದೆ. ಮುಂದುಗಡೆ ಕ್ಯಾಮರಾ ಇದ್ದರು ಈ ರೀತಿ ಶಾಸಕರು ಅವಾಜ್​ ಹಾಕುತ್ತಾರೆ, ಇಲ್ಲದಿದ್ದಾಗ ಅದೇನ್​ ಮಾಡ್ತಾರೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕಿಡಿಕಾರುತ್ತಿದ್ದಾರೆ.

Exit mobile version