Site icon PowerTV

ಜೋಗಿಮಟ್ಟಿ ಪ್ರವಾಸಿ ಮಂದಿರದಲ್ಲಿ ಮುರುಘಾ ಮಠ ಶ್ರೀಗಳ ತೀವ್ರ ವಿಚಾರಣೆ

ಚಿತ್ರದುರ್ಗ: ಮುರುಘಾ ಮಠದ ಶ್ರೀಗಳು ಇಂದು ಬಂಧನ ಹಿನ್ನಲೆಯಲ್ಲಿ ಚಿತ್ರದುರ್ಗದ ಜೋಗಿಮಟ್ಟಿ ಪ್ರವಾಸಿ ಮಂದಿರದಲ್ಲಿ ಶ್ರೀಗಳನ್ನ ಪೊಲೀಸರು ತೀವ್ರ ವಿಚಾರಣೆ ಮಾಡಲಾಗುತ್ತಿದೆ ಎಂದು ಚಿತ್ರದುರ್ಗ ಎಸ್​.ಪಿ ಪರಶುರಾಮ್ ಹೇಳಿದ್ದಾರೆ.

ಮುರುಘಾ ಮಠದ ಮುಂದೆ ಬಹಳ ಜನರು ಜಮಾಯಿಸಿದ ಹಿನ್ನಲೆ ಹಿಂಬಾಗಿಲಿಂದ ಸ್ವಾಮೀಜಿಗಳನ್ನ ಪೊಲೀಸರು ಕರೆದೊಯ್ದಿದ್ದಾರೆ. ಇನ್ನು ಮುರುಘಾ ಶ್ರೀಗಳನ್ನ ಮೊದಲು ಕೊರೊನಾ ಪರೀಕ್ಷೆಗೆ ಒಳಪಡಿಸಲಿದ್ದಾರೆ.

ಮುರುಘಾ ಶ್ರೀಗಳ ವಿಚಾರಣೆ ನಂತರ ನ್ಯಾಯಾಧೀಶರ ಮುಂದೆ ಪೊಲೀಸರು ಒಪ್ಪಿಸಲಿದ್ದಾರೆ. ಇನ್ನು ಸ್ವಾಮೀಜಿ ಉಸಿರಾಟದ ತೊಂದರೆ ಇದೆ ಎಂದು ಆಸ್ಪತ್ರೆಗೆ ಸೇರಲು ಮನವಿ ಮಾಡಿದ್ದಾರೆ. ಬಿಪಿ, ಶುಗರ್ ಟೆಸ್ಟ್ ಮಾಡಿಸಬೇಕಿದೆ ಎಂದು ರಿಕ್ವೆಸ್ಟ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Exit mobile version