Site icon PowerTV

ಗಂಡ-ಹೆಂಡತಿಯ ನಡುವೆ ಜಗಳ : ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ.

ತುಮಕೂರು : ಗಂಡ-ಹೆಂಡತಿಯ ನಡುವೆ ಜಗಳ ಉಂಟಾಗಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲ್ಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ.

ಗೌರಮ್ಮ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.ಒಂದು ವರ್ಷದ ಹಿಂದೆಯಷ್ಟೇ ರವಿತೇಜ ಜೊತೆ ಮದುವೆಯಾಗಿತ್ತು. ಅನುಪನಹಳ್ಳಿಯ ನಿವಾಸಿ ರವಿತೇಜನನ್ನ ಮದುವೆ ಆಗಿದ್ದಂತಹ ಗೌರಮ್ಮ. ಗೌರಮ್ಮ ತುಮಕೂರು ಹೊರವಲಯದ ಮಂಚಗೊಂಡನಹಳ್ಳಿಯ ನಿವಾಸಿಯಾಗಿದ್ದರು. ಗೌರಮ್ಮಗೆ ತಂದೆ-ತಾಯಿ ಇರಲಿಲ್ಲ, ಚಿಕ್ಕಮ್ಮನೇ ಸಾಕಿ, ಮದುವೆ ಮಾಡಿಕೊಟ್ಟಿದ್ದರು. ಆದರೆ ನಿನ್ನೆ ಸಂಜೆ ಗೌರಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು, ತುಮಕೂರಿನ ಯಲ್ಲಾಪುರದ ಗಾರ್ಮೆಂಟ್ಸ್‌‌ವೊಂದರಲ್ಲಿ ಕೆಲಸ ಮಾಡ್ತಿದ್ದಂತಹ ರವಿತೇಜ. ಪರಿಶಿಷ್ಟ ಜಾತಿಯ ಗೌರಮ್ಮನನ್ನ ಮದುವೆಯಾಗಿದ್ದ, ಸರ್ಕಾರದಿಂದ ಸಿಗುವ 3 ಲಕ್ಷ ಸೌಲಭ್ಯವನ್ನೂ ಪಡೆದಿದ್ದ. ಪರಿಶಿಷ್ಟ ಜಾತಿಗೆ ಸೇರಿದ ಗೌರಮ್ಮ ಎಂದು ಖ್ಯಾತೆ ತೆಗೆದಿದ್ದಂತಹ ರವಿತೇಜ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version