Site icon PowerTV

‘ಬ್ಯಾಚುಲರ್ ಪಾರ್ಟಿ’ನಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡ ರಿಷಬ್, ರಕ್ಷಿತ್​ ಶೆಟ್ಟಿ

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಹಾಗೂ ನಟ ರಿಷಬ್ ಶೆಟ್ಟಿ ಸೇರಿ ಒಟ್ಟಾಗಿ ಮತ್ತೊಮ್ಮೆ ‘ಬ್ಯಾಚುಲರ್ ಪಾರ್ಟಿ’ ಎಂಬ ಸಿನಿಮಾ ಮೂಲಕ ಒಟ್ಟಾಗಿ ನಟಿಸಲಿದ್ದಾರೆ.

ನಟನೆ ಮಾತ್ರವಲ್ಲದೆ, ನಿರ್ಮಾಪಕನಾಗಿಯೂ ಸೈ ಎನಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ, ಭಿನ್ನ ಸಿನಿಮಾಗಳು ಅವರ ನಿರ್ಮಾಣ ಸಂಸ್ಥೆಯಿಂದ ಹೊರ ಬರುತ್ತಿದೆ. ‘777 ಚಾರ್ಲಿ’ ಸಿನಿಮಾದಿಂದ ಸಾಕಷ್ಟು ಲಾಭ ಕಂಡಿರುವ ರಕ್ಷಿತ್ ಈ ಹಣವನ್ನು ಮತ್ತೆ ಸಿನಿಮಾ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ‘ಪರಮವಃ’ ಸ್ಟುಡಿಯೋಸ್ ಮೂಲಕ ಎರಡು ಹೊಸ ಸಿನಿಮಾ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ. ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಹೆಸರಿನ ಎರಡು ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಗಣೇಶ ಹಬ್ಬದಂದು ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ಸಿಕ್ಕಿದೆ. ಇದು ಅವರ ಚೊಚ್ಚಲ ನಿರ್ದೇಶನ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಈ ಚಿತ್ರದ ಫಸ್ಟ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ.

Exit mobile version