Site icon PowerTV

ರಸ್ತೆ ಅಪಘಾತದಲ್ಲಿ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ ಸಾವು

ನವದೆಹಲಿ: ಆಸ್ಟ್ರೇಲಿಯಾದ ಮೆಲ್ಬೋರ್ನ್ ಬಳಿ ನಡೆದ ಕಾರು ಅಪಘಾತದಲ್ಲಿ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ ಸಾವಿಗೀಡಾಗಿದ್ದಾರೆ.

ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಸಿಧು ಮೂಸೆವಾಲಾ ನಿಧನದ ನಂತರ ಪಂಜಾಬಿ ಚಿತ್ರರಂಗಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

ಸದ್ಯಕ್ಕೆ ಈ ಪ್ರಕರಣದಲ್ಲಿ ನಿರ್ವೈರ್ ಸಿಂಗ್ ಕುಟುಂಬದವರು ಯಾರ ಬಗ್ಗೆಯೂ ಆರೋಪಿಸಿಲ್ಲ. ಪ್ರಸಿದ್ಧ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ ಅವರು ತಮ್ಮ ಗಾಯನ ವೃತ್ತಿಜೀವನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸುಮಾರು ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡಿದ್ದರು. ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಅತ್ಯಂತ ಅಪಾಯಕಾರಿ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ.

ನಿರ್ವೈರ್ ಸಿಂಗ್ ಸಾವಿನ ಬಗ್ಗೆ ಮಾಹಿತಿ ಪಡೆದ ನಂತರ ಪಂಜಾಬಿ ಗಾಯಕ ಗಗನ್ ಕೊಕ್ರಿ ನಿರ್ವೈರ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ.

Exit mobile version