Site icon PowerTV

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ: ಸಿದ್ದರಾಮಯ್ಯ

ಬೆಂಗಳೂರು: ದೇಶದಲ್ಲಿ ಆತಂಕದ ವಾತಾವರಣವಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಅಪಾಯಕ್ಕೆ ಸಿಲುಕಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅಟಾಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾದ್ರು ಆಗ ಸಂವಿಧಾನ ಪುನಾರಚನೆಗೆ ಹೊರಟಿದ್ರು. ಆಗ ನಾರಾಯಣ್ ರಾಷ್ಟ್ರಪತಿಗಳಾಗಿದ್ರು ಹಾಗಾಗಿ ಪುನಾರಚನೆಗೆ ಅವಕಾಶ ಸಿಗಲಿಲ್ಲ. ಇಲ್ಲದಿದ್ದರೆ ಆಗಲೇ ಪುನಾರಚನೆ ಆಗಿಬಿಡುತ್ತಿತ್ತು.

ಅನಂತ್ ಕುಮಾರ್ ಹೆಗಡೆ ಪದೇ ಪದೇ ಹೇಳ್ತಿದ್ದ ಸಂವಿಧಾನ ಬದಲಾವಣೆ ಮಾಡ್ತೇವೆ ಎಂದು ಹೇಳ್ತಿದ್ದರು. ಆದರೆ ಪ್ರಧಾನಿ ಅವನ ವಿರುದ್ಧ ಕ್ರಮ ಜರುಗಿಸಲಿಲ್ಲ. ಇದು ಬಿಜೆಪಿಯವರ ಮನಸ್ಥಿತಿ ಅದು ಅನಂತ್ ಕುಮಾರ ಹೆಗಡೆ ಬಾಯಲ್ಲಿ ಬಂದಿದೆ ಎಂದರು.‘

ಸದ್ಯ ಪ್ರಜಾಪ್ರಭುತ್ವ ಉಳಿಸುವ ಕೆಲಸ ಈಗ ಆಗಬೇಕಿದೆ. ಅದಕ್ಕೆ ಈ ಜೋಡೋ ಪಾದಯಾತ್ರೆ ಅವಕಾಶ ಕಲ್ಪಿಸಲಿದೆ. ಈ ಹೋರಾಟ ಸ್ವಾತಂತ್ರ್ಯ ಹೋರಾಟ ಇದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Exit mobile version