Site icon PowerTV

ಕೆಂಪೇಗೌಡ ಥೀಮ್‌ ಪಾರ್ಕ್‌ಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ

ಬೆಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ ಸಲ್ಲಿಸಿದರು. ಒಟ್ಟು 80 ಕೋಟಿ ವೆಚ್ಚದಲ್ಲಿ ಥೀಮ್‌ ಪಾರ್ಕ್ ನಿರ್ಮಾಣ ಮಾಡಲಾಗ್ತಿದೆ ಎಂದರು.

ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಆಡಳಿತ ಸುವರ್ಣ ಯುಗವಾಗಿತ್ತು. ನಂತರ ನಾಡಪ್ರಭು ಕೆಂಪೇಗೌಡರ ಸೇವೆ ಅಗಾಧವಾದದು ಎಂದು ಬಣ್ಣಿಸಿದರು ಅಲ್ಲದೇ ಅವರ ನೆನಪು ಶಾಶ್ವತವಾಗಿರಬೇಕು ಅಂತ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿಮಾನ ನಿಲ್ದಾಣ ನಾಡಪ್ರಭು ಕೆಂಪೇಗೌಡರ ಹೆಸರಲ್ಲಿದೆ. ಹಾಗೆ ಥೀಮ್ ಪಾರ್ಕ್ ಮಾಡಲಾಗಿದೆ. ಈ ಥೀಮ್ ಪಾರ್ಕಿಗೆ ನಾಡಿನೆಲ್ಲಡೆ ಇರೋ ಕೆರೆಗಳ ಮಣ್ಣು ಮತ್ತು ನೀರನ್ನ ತರುವ ಕೆಲಸ ಮಾಡಲಾಗಿದೆ ಎಂದರು.

Exit mobile version