Site icon PowerTV

ಬೆಂಗಳೂರು ನಮ್ಮ ಶಕ್ತಿ : ಅಶ್ವತ್ಥ್​​ ನಾರಾಯಣ

ದೇವನಹಳ್ಳಿ : ಕೆಂಪೇಗೌಡರ ಪ್ರತಿಮೆ ಅನಾವರಣ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಅಶ್ವತ್ಥ್​​​ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ವಿಶ್ವಮಾನ್ಯ ಪಡೆದ ಏಕೈಕ ನಗರ ಅದು ಬೆಂಗಳೂರು. ಬೆಂಗಳೂರು ಸಂಸ್ಥಾಪಕರಾದ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವುದು ಬಹು ದಿನದ ಬೇಡಿಕೆ ಆಗಿತ್ತು. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಆಗ್ತಿದೆ. ಜಾತಿ, ಧರ್ಮಾತೀತವಾಗಿ ಬೆಳೆದಿರೋದು ಬೆಂಗಳೂರಿನ ಶಕ್ತಿ ವರ್ಣಿಸಲು ನೂರು ಪದಗಳು ಸಾಕಾಗಲ್ಲ. ಈ ಸಂದೇಶವನ್ನ ವಿಶ್ವಕ್ಕೆ ತಿಳಿಸುವಂತಾಗಬೇಕು.

ಇನ್ನು, ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಉದ್ಘಾಟನೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು. ಇನ್ನೂ ಪ್ರತಿಮೆ ಉದ್ಘಾಟನೆಯನ್ನ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಆಗಬೇಕು ಎಂಬುವುದು ನಮ್ಮ ಉದ್ದೇಶ. ನಾಡಿನ ಜನ ಸೇರಿ ಈ ಕಾರ್ಯಕ್ರಮ ಮಾಡಬೇಕು ಎಂದರು.

Exit mobile version