Site icon PowerTV

ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು

ಹಾವೇರಿ : ಈಜು ಬಾರದ ಇಬ್ಬರು ಬಾಲಕರು ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಹೊರವಲಯದಲ್ಲಿರುವ ಕೆಂಪಿ ಕೆರೆಯಲ್ಲಿ ಸಂಭವಿಸಿದೆ.

ಮೃತ ಬಾಲಕರು ಸವಣೂರು ಪಟ್ಟಣದ ಕಾರಿಗರ್ ಪ್ಲಾಟನ ನಿವಾಸಿಗಳಾದ ಸಯ್ಯದ ರೇಹಾನ ಬಾಬಾಹುಸೇನ್ ಮಕಾಂದಾರ (13) ಇನ್ನೋರ್ವ ಬಾಲಕ ಜಿಲಾನಿ ಮಹ್ಮದ ಖಾಸೀಮ ಮಂಡಾಲೆ (12) ಎಂದು ಗುರುತಿಸಲಾಗಿದೆ.

ಸತತ ಮಳೆಯಿಂದಾಗಿ ಶಾಲೆಗೆ ರಜೆ ಘೋಷಿಸಿದ ಹಿನ್ನೆಲೆ, ಐವರು ಬಾಲಕರು ಸೇರಿ ಪಟ್ಟಣದ ಹೊರವಲಯದ ಕೆಂಪಿ ಕೆರೆಗೆ ಸ್ನಾನಕ್ಕೆಂದು ತೆರಳಿದ್ದರು. ಆದರೆ ಐವರು ಬಾಲಕರ ಪೈಕಿ ಇಬ್ಬರು ಕೆರೆಯಲ್ಲಿ ಇಳಿದಿದ್ದರು. ಈ ವೇಳೆ ಈಜಲು ಬಾರದ ಇಬ್ಬರು ಬಾಲಕರು ಸ್ನಾನಕ್ಕೆ ಕೆರೆಗಿಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಲೇ ಸ್ಥಳೀಯರು ಬಾಲಕರನ್ನು ಹೊರ ತೆಗೆದು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version