Site icon PowerTV

ಗೌರಿ- ಗಣೇಶ ಹಬ್ಬಕ್ಕೆ 500 ಹೆಚ್ಚುವರಿ KSRTC ಬಸ್..!

ಬೆಂಗಳೂರು : ಹಬ್ಬ ಹರಿದಿನ ಬಂತಂದರೆ ಸಾಕು KSRTC ಜನಸಾಮಾನ್ಯರಿಗೆ ಗುಡ್​ ನ್ಯೂಸ್​ ನೀಡುತ್ತೆ.. ಈ ಬಾರಿ ಗಣೇಶ ಹಬ್ಬದ ಅಂಗವಾಗಿ ದೂರದ ಪ್ರಯಾಣ ಮಾಡುವವರಿಗೆ ಆಯಾಸದ ಜೊತೆಗೆ ಸ್ವಲ್ಪ ಆತಂಕವೂ ಇದೆ.

ಈ ಬಾರಿ ಗಣೇಶ ಹಬ್ಬಕ್ಕೆ ಕೆಎಸ್​ಆರ್​ಟಿಸಿ 500ಕ್ಕೂ ಹೆಚ್ಚುವರಿ ಬಸ್ಸುಗಳನ್ನು ರಸ್ತೆಗಿಳಿಸಿದೆ.. ಆದರೆ ಹಬ್ಬಕ್ಕೆ ಖಾಸಗಿ & ಸರ್ಕಾರಿ ಬಸ್ ಟಿಕೆಟ್ ದರ ಬಲು ದುಬಾರಿಯಾಗಿದೆ.. ನಗರದಿಂದ ದೂರದ ಊರಿಗೆ ಹೋಗಬೇಕಾದ ಮಂದಿ ಹೆಚ್ಚು ಹಣ ತೆತ್ತು ಪ್ರಯಾಣ ಮಾಡಬೇಕಿದೆ. ಹಬ್ಬಕ್ಕೆಂದು ವಿಶೇಷ ಸೇವೆ ನೀಡುತ್ತಿರುವ ಬಸ್​ಗಳಲ್ಲಿ ಶೇ.15 ರಿಂದ 20 ರಷ್ಟು ಟಿಕೆಟ್ ದರ ಹೆಚ್ಚಳವಾಗಿದೆ. ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಸಾಮಾನ್ಯ, ವೇಗದೂತ, ಕರ್ನಾಟಕ ವೈಭವ, ರಾಜಹಂಸ, ಐರಾವತ ಕ್ಲಬ್ ಕ್ಲಾಸ್ ಹಾಗೂ ಡೈಮಂಡ್ ಕ್ಲಾಸ್ ಬಸ್ ಸೇವೆಯ ಜೊತೆಗೆ ಹೆಚ್ಚುವರಿ 500 ವಿಶೇಷ ಬಸ್ಸುಗಳ ಸೇವೆ ಕಲ್ಪಿಸಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಹಾಗೂ ಶಾಂತಿನಗರ ಬಸ್ ನಿಲ್ದಾಣ ಸೇರಿದಂತೆ ವಿವಿಧ ನಿಲ್ದಾಣದಿಂದ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ.

ಹಬ್ಬಕ್ಕೆ ಖಾಸಗಿ ಬಸ್‌ಗಳೆಲ್ಲವೂ ಫುಲ್ ಆಗಿದ್ದು, ಬಸ್‌ಗಳಲ್ಲಿ ಸೀಟು ಕಾಯ್ದಿರಿಸುವುದೇ ಸವಾಲಾಗಿದೆ. ಆನ್‌ಲೈನ್ ಬುಕ್ಕಿಂಗ್ ವೆಬ್‌ಸೈಟ್‌ಗಳಲ್ಲೂ ‘ಬಸ್‌ಗಳು ಫುಲ್’ ಆಗಿದೆ. ಆಯಾ ಟ್ರಾವೆಲ್ಸ್‌ಗೆ ಕರೆ ಮಾಡಿದ್ರೆ ದುಬಾರಿ ದರ ಹೇಳ್ತಾರೆ. ಹಬ್ಬದ ಸೀಜನ್ ಇದೆ. ಎಲ್ಲರೂ ದರ ಹೆಚ್ಚು ಮಾಡಿದ್ದಾರೆ. ನಾವೂ ಮಾಡಿದ್ದೇವೆ ಎನ್ನುತ್ತಿದ್ದಾರೆ.
ಹೀಗಾಗಿ ಜನರಿಗೆ ದರ ಏರಿಕೆ ಬಿಸಿ ತಟ್ಟಿದೆ.

ಒಟ್ನಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನ ವಿಶೇಷ ಬಸ್​ಗಳು ಕಾರ್ಯಾಚರಣೆ ಮಾಡಲಿವೆ. ಆದರೆ ಹಬ್ಬಕ್ಕೆ ಅಂತ ತೆರಳುವ ಮಂದಿ ಬಳಿ ಹೆಚ್ಚು ಟಿಕೆಟ್ ದರ ತೆಗೆದುಕೊಳ್ಳುತ್ತಿರೋದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

Exit mobile version