Site icon PowerTV

ಮಳೆ ಆರ್ಭಟ: ನಾಳೆ ಸ್ಥಳಕ್ಕೆ ಭೇಟಿ, ಇಂದು ಅಧಿಕಾರಿಗಳ ಸಭೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರು‌ ಮಳೆ ಹಾನಿ ಪರಿಶೀಲನೆ ಮಾಡ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ನಾಳೆ ಮಧ್ಯಾಹ್ನದ ಮೇಲೆ ಬೆಂಗಳೂರಿನ ಹಲವು ಪ್ರದೇಶಗಳಿಗೆ ಭೇಟಿ ಕೊಡ್ತೇನೆ. ಈಗಾಗಲೇ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದ್ದೇನೆ. ನಮ್ಮ‌ಮೊದಲ ಆಧ್ಯತೆ ರಕ್ಷಣಾ ಕಾರ್ಯವಾಗಿದೆ. ನಾಳೆ ಮಧ್ಯಾಹ್ನದ ಮೇಲೆ ಭೇಟಿ ಕೊಡ್ತೇನೆ ಎಂದರು.

ಹಿಂದೆಂದೂ ಬರದ ಮಳೆ ಬಂದಿದೆ ಕೆಲವು ಪ್ರದೇಶಗಳಲ್ಲಿ ಆಗಿದೆ. ನಾಲ್ಕೈದು ತಿಂಗಳಿಂದ ನಿರಂತರ ಮಳೆ ಬರ್ತಿದೆ. ಸ್ಡಿಆರ್​ಡಿಎಫ್, ಬಿಬಿಎಂಪಿ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇವತ್ತು ಸಂಜೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಇವತ್ತು ಹಬ್ಬ ಇದೆ, ಜನರಿಗೆ ತೊಂದ್ರೆ ಆಗುತ್ತೆ ಅಂತ ಪರಿಶೀಲನೆಗೆ ಹೋಗಲ್ಲ. ರಾಜ್ಯದಲ್ಲಿ ಉಂಟಾದ ಮಳೆಯ ಹಾನಿ ಬಗ್ಗೆ ಇಂದು ಸಂಜೆ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Exit mobile version