Site icon PowerTV

ಕಾರ್ ಚೇಜ್ ಮಾಡಿ ಹಣ ವಶಪಡಿಸಿಕೊಂಡ ಪೊಲೀಸರು

ಹಾವೇರಿ: ಅಕ್ರಮವಾಗಿ ಹಣ ಸಾಗಿಸುತ್ತಿದ್ದವರನ್ನ ಪ್ರಾಣದ ಹಂಗು ತೊರೆದು ಜಿಲ್ಲೆಯ ಹಾನಗಲ್ ತಾಲೂಕಿನ ಪೊಲೀಸರು ಬಂಧಿಸಿದ ವಿಡಿಯೋ ಪವರ್ ಟಿವಿ ಗೆ ಲಭ್ಯವಾಗಿದೆ.

ಅಕ್ರಮವಾಗಿ ಹಣ ಸಾಗಿಸುತ್ತಿದ್ದವರನ್ನ ಬೆನ್ನಟ್ಟಿ ಹಿಡಿದ ಹಾನಗಲ್ ಪೊಲೀಸರ ಕಾರ್ಯಚರಣೆಯ ರೋಚಕವಾಗಿತ್ತು. ಪಕ್ಕಾ ಸಿನಿಮಾ ಸೈಲ್ ನಲ್ಲಿ ಕಾರನ್ನ ಬೆನ್ನಟ್ಟಿದ ಪೊಲೀಸರು ಕೊಬೆಗು ಹಣ ಸಾಗಿಸುತ್ತಿದ್ದವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸುಮಾರು 85 ಲಕ್ಷ ರೂ ಹಣವನ್ನು ಪೊಲೀಸರು ಜೀವದ ಹಂಗು ತೊರೆದು ಜಪ್ತಿ ಮಾಡಿದ್ದಾರೆ. ಕಾರಿನ ಬ್ಯಾಗಿನಲ್ಲಿ ತುಂಬಿಟ್ಟದ್ದ 500, 200, 100 ಹಾಗೂ 50 ರೂ ಮುಖಬೆಲೆಯ ಒಟ್ಟು 85 ಲಕ್ಷ ರೂ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಈ ಅಕ್ರಮ ಹಣವನ್ನು ಸಾಗಿಸುತ್ತಿದ್ದವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಎಂದು ಹೇಳಲಾಗಿದೆ.

 

Exit mobile version