Site icon PowerTV

ಬಹಮನಿ ಸುಲ್ತಾನರ ಕೋಟೆ‌ ಮೇಲೆ ಏರ್ ಶೋ ಪ್ರದರ್ಶನ

ಬೀದರ್ : ಎರಡು ದಿವಸ ಏರ್ ಶೋ ಪ್ರದರ್ಶನ ಇರುವುದರಿಂದ ಗಡಿ ಜಿಲ್ಲೆಯಾದ ಬೀದರ್ ಜನರಲ್ಲಿ ಹಬ್ಬದ ವಾತಾವರಣದಂತೆ ನಿರ್ಮಾಣವಾಗಿದೆ.

ಬೀದರ್ ಬಹಮನಿ ಸುಲ್ತಾನರ ಕೋಟೆ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ, ಈ ಇತಿಹಾಸ ಕೋಟೆ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತು ಈ ಕೋಟೆ ಇವಾಗ ಬೀದರ್ ಜಿಲ್ಲಾದ್ಯಾಂತ ಹಬ್ಬದ ವಾತಾವರಣದಂತೆ ಏರ್ ಶೋ ಪ್ರದರ್ಶನ ನೋಡಲು ಜನರು ಸಜ್ಜಾಗಿದ್ದಾರೆ.

ಭಾರತೀಯ ವಾಯುಪಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತವಾಗಿ ನಗರದ ಜನರಿಗೆ ಏರ್​ ಶೋ ನೋಡಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 2 ಹಾಗೂ 3 ರಂದು ಸಂಜೆ 4.30ತಕ್ಕೆ ಏರ್ ಶೋ ಆಯೋಜನೆ ಮಾಡಲಾಗಿದೆ.

ಸೆ. 2 ರಂದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಸೆ.3ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಕರೆತಂದು ಏರ್‌ ಶೋ ವೀಕ್ಷಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.

Exit mobile version