Site icon PowerTV

ಗಣೇಶನ ಜತೆಗೆ ಕುಳಿತ ಅಪ್ಪು ಗಣಪತಿ, ಪೂಜೆ ಸಲ್ಲಿಸಿದ ಭಕ್ತರು

ಮೈಸೂರು: ದೇಶಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಸಡಗರ ಜೋರಾಗಿದ್ದು, ಗಣಪನ ಜೊತೆಗೆ ಪುನೀತ್ ರಾಜ್ ಕುಮಾರ್ ಕೂಡ ಪ್ರತ್ಯಕ್ಷರಾಗಿದ್ದಾರೆ.

ಮೈಸೂರಿನಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಗಣಪನ ಡಿಮ್ಯಾಂಡ್ ಹಚ್ಚಿದ್ದು ಮೈಸೂರಿನ ಹಲವೆಡೆ ಗಣೇಶನ ಜೊತೆಗಿರೋ ಅಪ್ಪುವಿನ ಮೂರ್ತಿಗೆ ಭಕ್ತಗಣ ಪೂಜೆ ಸಲ್ಲಿಸಲಾಗುತ್ತಿದೆ.

ಅದರಂತೆ ಮೈಸೂರಿನ ಅರಸು ರಸ್ತೆಯಲ್ಲಿ ಸಿಂಹದ ಮರಿ ಸೇವಾ ಟ್ರಸ್ಟ್, ಹಾಗೂ ಅಪ್ಪು ಅಭಿಮಾನಿಗಳ ವತಿಯಿಂದ ವಿಶೇಷ ಗಣಪನನ್ನ ಪೂಜಿಸಲಾಗ್ತಿದೆ. ಗಣೇಶ ಮೂರ್ತಿಯಿಂದ ಅಪ್ಪುಗೆ ಆಶಿರ್ವಾದ ಮಾಡುವ ರೀತಿಯಲ್ಲಿ ಮೂರ್ತಿ ತಯಾರಿಸಲಾಗಿದೆ. ಇನ್ನೂ ವಿಶಿಷ್ಠವಾದ ಗಣಪತಿ ನೋಡಲು ಭಕ್ತರ ದಂಡು ಗಣಪತಿ ಕೂರಿಸುವ ಸ್ಥಳಕ್ಕೆ ಬಂದು ಗಣೇಶನ ಜೊತೆ ದೇವರ ಸ್ವರೂಪದಲ್ಲಿರೋ ಅಪ್ಪು ದರ್ಶನ ಮಾಡ್ತಿದ್ದಾರೆ.

Exit mobile version