Site icon PowerTV

8 ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಮೋಹಕ ತಾರೆ ರಮ್ಯಾ ಎಂಟ್ರಿ

ಬೆಂಗಳೂರು: ಗಣೇಶ ಚತುರ್ಥಿಯಂದು ನಟಿ ರಮ್ಯಾ ಅವರು ತಮ್ಮ ಸಿನಿಮಾ ಲೈಫ್​ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದು, ಈ ಮೂಲಕ 8 ವರ್ಷದ ಬಳಿಕ ಮತ್ತೆ ಸ್ಯಾಂಡಲ್​ವುಡ್​​ಗೆ ನಿರ್ಮಾಪಕಿಯಾಗಿ ಮೋಹಕ ತಾರೆ ರಮ್ಯಾ ಎಂಟ್ರಿಕೊಟ್ಟಿದ್ದಾರೆ.

‘ಆಪಲ್ ಬಾಕ್ಸ್​ ಸ್ಟೂಡಿಯೋ’ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ಈ​ ಸ್ಟೂಡಿಯೋದಲ್ಲಿ ಒಟ್ಟು ಈಗ 2 ಸಿನಿಮಾಗಳ ನಿರ್ಮಾಣಕ್ಕೆ ರಮ್ಯಾ ಸಜ್ಜಾಗಿದ್ದೇನೆ.  ಓಟಿಟಿ ಫ್ಲಾಟ್​ಫಾರಂ ಸಿನಿಮಾಗಳು, ವೆಬ್​ ಸೀರಿಸ್​ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ ಎಂದು ರಮ್ಯಾ ತಮ್ಮ ಕನಸುಗಳನ್ನ ಈ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿನ್ನೆ ನಟಿ ರಮ್ಯಾ ಇಂದು(ಅಗಸ್ಟ್​ 31) 11.15ಕ್ಕೆ ಸಿಹಿಸುದ್ದಿ ಕೊಡ್ತೀನಿ ಎಂದು ನಟಿ ರಮ್ಯಾ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು. ಏನಿರಬಹುದು ಎಂದು ಅವರ ಅಭಿಮಾನಿಗಳೆಲ್ಲ ಕಾಯುತ್ತಿದ್ದರು, ಸಿನಿಮಾ ಪಂಡಿತರು ರಮ್ಯಾ ಏನಾದ್ರೂ ಮದುವೆ ಆಗಲಿದ್ದಾರಾ ಅಥವಾ ಸಿನಿಮಾ ಮಾಡಲು ರೆಡಿ ಆಗಿದ್ದಾರಾ ಎಂಬ ಮಾತುಗಳು ವ್ಯಕ್ತವಾಗಿತ್ತು. ಈಗ ರಮ್ಯಾ ಅವರು ಟ್ವೀಟ್​ ಮಾಡುವ ಮೂಲಕ ಎಲ್ಲಾ ಊಹಾಪೋಹ ಸುದ್ದಿಗೆ ತೆರೆ ಎಳೆದಿದ್ದಾರೆ.

Exit mobile version