Site icon PowerTV

ಪ್ರಧಾನಿಗೂ ಮೊದಲು ರಾಜ್ಯಕ್ಕೆ ಬರಲಿದ್ದಾರೆ ಯೋಗಿ ಆದಿತ್ಯನಾಥ್

ಬೆಂಗಳೂರು : ಪ್ರಧಾನಿಗೂ ಮೊದಲು ಯೋಗಿ ಆದಿತ್ಯನಾಥ್ ಬರಲಿದ್ದು, ಸೆಪ್ಟೆಂಬರ್ 1ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

ಸೆಪ್ಟಂಬರ್ 1ರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸೋ ಯೋಗಿ. ಬೆಂಗಳೂರಿನಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.45ಕ್ಕೆ ನೆಲಮಂಗಲ ಹೆಲಿಪ್ಯಾಡ್‌ಗೆ ತೆರಳಲಿರೋ ಯೋಗಿ. 11.55ಕ್ಕೆ ಕಾರಿನ ಮೂಲಕ ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ & ಯೋಗಿಕ್ ಸೈನ್ಸಸ್ ಕ್ಯಾಪಸ್‌ಗೆ ಭೇಟಿ ನೀಡಲಿದ್ದಾರೆ.

ಇನ್ನು, ಸುಮಾರು 15 ನಿಮಿಷ ಕ್ಯಾಂಪಸ್ ವೀಕ್ಷಿಸಲಿರುವ ಬುಲ್ಡೋಜರ್ ಬಾಬಾ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಜೊತೆ ಮಾತುಕತೆ ನಡೆಸಿದ್ದು, ಮಧ್ಯಾಹ್ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ & ಯೋಗಿಕ್ ಸೈನ್ಸಸ್ “ಕ್ಷೇಮವನ”ದ ಉದ್ಘಾಟನೆ ಮಾಡಿದ ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಉತ್ತರ ಪ್ರದೇಶಕ್ಕೆ ವಾಪಸ್ಸಾಗಲಿದ್ದಾರೆ.

Exit mobile version