Site icon PowerTV

ಸ್ಯಾಂಡಲ್​ವುಡ್​ ಕ್ವೀನ್​ ರೀಎಂಟ್ರಿ?

ಗಣೇಶ್ ಹಬ್ಬದ ದಿನದಂದು ಸ್ಯಾಂಡಲ್ ವುಡ್ ಕ್ವೀನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರಂತೆ. ಈ ಕುರಿತು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾಳೆ ಹನ್ನೊಂದು ಗಂಟೆಗೆ ಸಿಹಿ ಸುದ್ದಿ ಕೊಡುವೆ. ಈ ಸುದ್ದಿಯನ್ನು ಕೊಡಲು ನಾನು ಎಕ್ಸೈಟ್ ಆಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗದು ನಿಜವಾಗುವ ಕಾಲ ಬಂದಿದೆ. ಬಹುಶಃ ಅದೇ ಸುದ್ದಿಯನ್ನೇ ನಾಳೆ ಅಭಿಮಾನಿಗಳಿಗೆ ಕೊಡಲಿದ್ದಾರೆ ಎನ್ನುವುದು ಹಲವರ ಊಹೆ. ಅದು ನಿಜವೂ ಆಗಿರಬಹುದು. ಯಾಕೆಂದರೆ, ಅನೇಕ ದಿನಗಳಿಂದ ಅವರು ಸಿನಿಮಾ ಸಂಬಂಧಿ ನಾನಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಇನ್ನು, ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ ಸಿನಿಮಾವನ್ನು ರಮ್ಯಾ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರು ಪಾತ್ರವನ್ನೂ ಮಾಡಲಿದ್ದಾರಂತೆ. ಬಹುಶಃ ನಾಳೆ ಅದೇ ಸಿಹಿ ಸುದ್ದಿಯನ್ನು ಅವರು ಅಭಿಮಾನಿಗಳಿಗೆ ಕೊಡಬಹುದು ಎನ್ನಲಾಗುತ್ತಿದೆ. ಅದೇನು ಅಂತ ತಿಳಿದುಕೊಳ್ಳಲು ನಾಳೆವರೆಗೂ ಕಾಯಬೇಕು.

Exit mobile version