Site icon PowerTV

ಮುರುಘಾ ಶ್ರೀ ಶೀಘ್ರದಲ್ಲಿಯೇ ಆರೋಪ ಮುಕ್ತರಾಗಿ ಹೊರಬರ್ತಾರೆ

ಚಿತ್ರದುರ್ಗ: ಶ್ರೀಗಳು ಅತೀ ಶೀಘ್ರದಲ್ಲಿಯೇ ಆರೋಪ ಮುಕ್ತರಾಗಿ ಹೊರ ಬರಲಿದ್ದಾರೆ ಎಂದು ಕನಕಪುರದ ಮುಮ್ಮಡಿ ಶಿವರುದ್ರ ಸ್ವಾಮಿ ಅವರು ಹೇಳಿದರು.

ಇಂದು ಮುರುಘಾ ಮಠದ ಶ್ರೀಗಳ ಪರವಾಗಿ ಸುಮಾರು 20 ಕ್ಕೂ ಹೆಚ್ಚು ಸ್ವಾಮೀಜಿಗಳು ಮುರುಘಾ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಳಿಂದ ಸ್ವಾಮೀಜಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ತನಿಖೆ ನಂತರ ಸತ್ಯ ಹೊರಬರಲಿದೆ ಎಂದರು.

ಈ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ನಂತರ ಸ್ವಾಮೀಜಿಗಳ ಬಗ್ಗೆ ಮಾಡಲಾದ ಆರೋಪ ಹೊರಬರಲಿದೆ.  ಅವರು ಈ ಆರೋಪ ಮುಕ್ತರಾಗಿ ಹೊರ ಬರುತ್ತಾರೆಂಬ ನಂಬಿಕೆ ನಮ್ಮ ಮೇಲಿದೆ. ಮಠದ ಬೆಳವಣಿಗೆ ಆಕಾಶದ ಎತ್ತರಕ್ಕೆ ಬರಲಿದೆ. ಮುರುಘಾ ಮಠದ ಶ್ರೀಗಳ ಪರ ನಾವು ಇರಲಿದ್ದೇವೆ ಎಂದು ತಿಳಿಸಿದರು.

Exit mobile version