Site icon PowerTV

ದೋಣಿ ಮುಳುಗಡೆ : ಓರ್ವ ನಾಪತ್ತೆ, ಇಬ್ಬರ ರಕ್ಷಣೆ

ಕಾರವಾರ : ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿ ಓರ್ವ ನಾಪತ್ತೆಯಾಗಿದ್ದು, ಇಬ್ಬರು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಸಮುದ್ರದಲ್ಲಿ ನಡೆದಿದೆ.

ಘಟನೆಯಲ್ಲಿ ಜಾಲಿ ಗ್ರಾಮದ ನಾಗರಾಜ ಮೊಗೇರ ನಾಪತ್ತೆಯಾಗಿದ್ದು, ಪುರುಷೋತ್ತಮ ಹಾಗೂ ವಿಕ್ಟರ್ ರಾಜ ಎಂಬುವ ಇಬ್ಬರು ರಕ್ಷಣೆಗೆ ಒಳಗಾಗಿದ್ದಾರೆ. ಈ ಮೂವರು ಸೇರಿಕೊಂಡು ಜಾಲಿ ಬಳಿ ಅರಬ್ಬೀ ಸಮುದ್ರದಲ್ಲಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದ ಅಲೆ ದೋಣಿಗೆ ಅಪ್ಪಳಿಸಿ ದೋಣಿ ಪಲ್ಟಿಯಾಗಿ ಅದರಲ್ಲಿ ಮೂವರು ಸಮುದ್ರಲ್ಲಿ ಮುಳುಗಡೆಯಾಗಿದ್ದರು. ಈ ಮೂವರ ಪೈಕಿ ಇಬ್ಬರು ದಡ ಸೇರಿಕೊಂಡಿದ್ದು, ಓರ್ವ ನದಿಯಲ್ಲಿ ನಾಪತ್ತೆಯಾಗಿದ್ದಾನೆ‌ ರಕ್ಷಣೆಗೆ ಒಳಗಾಗಿದ್ದವರು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ಇನ್ನೂ ನಾಪತ್ತೆಯಾಗಿರುವವನ ರಕ್ಷಣೆಗಾಗಿ ಕಾರ್ಯಚೆಣೆ ನಡೆಸಲಾಗುತ್ತಿದೆ. ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ

Exit mobile version