Site icon PowerTV

ಭಾರತದಲ್ಲಿ ಮಳೆಯ ರೌದ್ರ ನರ್ತನ, ನಿಜವಾದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಭವಿಷ್ಯ.!

ಬೆಂಗಳೂರು: ಭಾರತದ ಪಶ್ಚಿಮ, ಪೂರ್ವ ರಾಜ್ಯಗಳಲ್ಲಿ ಮಳೆ ರೌದ್ರಾವತಾರ ಅಬ್ಬರಿಸಿ ಬೊಬ್ಬೆರುತ್ತಾನೆ ಎಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಅವರು ಹೇಳಿರುವ ಭವಿಷ್ಯವಾಣಿ ನಿಜವಾಗಿದೆ.

ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿದ ಭವಿಷ್ಯ ಈವರೆಗೂ ಯಾವುದು ಸಹ ಸುಳ್ಳಾಗಿಲ್ಲ. ಅದೇ ರೀತಿ ಪಶ್ಚಿಮ, ಪೂರ್ವದಲ್ಲಿ ಬರುವ ಕೇರಳ, ತಮಿಳುನಾಡು, ಆಂದ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಮಳೆಯ ಅತ್ಯಧಿಕವಾಗುತ್ತದೆ ಈ ಬಗ್ಗೆ ಅಲ್ಲಿನ ಸರ್ಕಾರಗಳು ಮಳೆ ಬಗ್ಗೆ ಎಚ್ಚರವಹಿಸುವಂತೆ ಶಿವಚಾರ್ಯ ಸ್ವಾಮೀಜಿ ಹೇಳಿದ್ದರು.

ಕಳೆದ ಒಂದು ವಾರದಿಂದ ಬೆಂಬಿಡದೆ ಮಳೆ ಸುರಿಯುತ್ತಿದ್ದು, ಸ್ವಾಮೀಜಿ ಹೇಳಿದ ಭವಿಷ್ಯವಾಣಿ ಈಗ ನಿಜವಾಗಿದೆ. ಅಲ್ಲದೇ, ವಿವಿಧ ರಾಜ್ಯಗಳಲ್ಲಾ ಅಗ್ನಿ ಅನಾಹುತಗಳ ಬಗ್ಗೆ ಸ್ವಾಮೀಜಿ ಭವಿಷ್ಯ ನುಡಿದಿದ್ದರು.

Exit mobile version