Site icon PowerTV

ಮುರುಘಾ ಶ್ರೀ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಜಿ. ಪರಮೇಶ್ವರ್ ಆಗ್ರಹ

ತುಮಕೂರು: ಜನಸಾಮಾನ್ಯರಿಂದು ಹಿಡಿದು ರಾಷ್ಟ್ರಪತಿವರೆಗೆ ಕಾನೂನು ಒಂದೇ ಮಾಡಿದ್ದಾರೆ. ಕಾನೂನಿನ ಪ್ರಕಾರ ಮುರುಘಾ ಶ್ರೀಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ. ದೇಶದಲ್ಲಿ ಯಾವುದೇ ಕಾನೂನು ಮಾಡಿದ್ರೆ ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಮಾಜಿ ಗೃಹಸಚಿವ, ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

ಇಂದು ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಕಾನೂನು ಕಾರ್ಯಗತ ಮಾಡೋದಕ್ಕೂ ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮುರುಘಾ ಶ್ರೀಗಳ ಮೇಲೆ ಬಂದಿರುವ ಅಪಾಧನೆ ಪ್ರೋಕ್ಸೋ ಕೇಸ್ ಆಗಿದೆ. ಕಾನೂನು ಮಾಡೋ ವಿಚಾರವಾಗಿ ಯಾರು ಕೂಡ ನಿರ್ಲಕ್ಷ್ಯ ಮಾಡಬಾರದು. ತಪ್ಪು ಮಾಡಿದ್ದಾರಾ ಇಲ್ವಾ ಅನ್ನೋ ತನಿಖೆಯ ಮೂಲಕ ತಿಳಿದುಕೊಳ್ಳೋ ಪ್ರಯತ್ನ ಆಗಬೇಕು ಎಂದರು.

ಕಾನೂನು ಒಂದು ಕಡೆ ಆದ್ರೆ ಸಮಾಜ ಒಂದು ಕಡೆ ಆಗುತ್ತದೆ. ಕಾನೂನು ಅವರಿಗೂ ಒಂದೇ ನಮ್ಮೆಲ್ಲರಿಗೂ ಒಂದೇ. ಮುಖ್ಯಮಂತ್ರಿಗಳು ಸಹ ಅದನ್ನೇ ಹೇಳಿದ್ದಾರೆ. ಕಾನೂನು ಪ್ರಕಾರ ಕ್ರಮ ತಗೋಳ್ತೀವಿ ಅಂತಾ ಹೇಳಿದ್ದಾರೆ ಅದನ್ನ ಮಾಡಬೇಕು ಅಂತಾ ನಾನು ಆಗ್ರಹ ಮಾಡುತ್ತೇನೆ ಎಂದರು.

ಹೈಪ್ರೋಪೈಲ್ ಕೇಸ್ ಅಂತಾ ಬಂಧನವಾಗಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಕೆಲವು ಸಂದರ್ಭಗಳಲ್ಲಿ ಆ ರೀತಿ ಆಗುತ್ತದೆ. ನಾನು ಗೃಹಸಚಿವನಾಗಿದ್ದಾಗ ಸಹ ಇಂತಹ ಘಟನೆಗಳು ನಡೆದಿದ್ದಾವೆ. ಹೈಪ್ರೋಪೈಲ್ ಕೇಸ್ ಬಂದಾಗ ಯೋಚನೆ ಮಾಡಿ, ಪರಿಶೀಲನೆ ಮಾಡಿ ಕ್ರಮ ತಗೋಳೋದು ನಾನು ನೋಡಿದ್ದೇನೆ. ಅವರಿಗೆ ಬೇರೆ ರೀತಿಯಲ್ಲಿ ಕಾನೂನು ನೋಡೋದು ಆಗಬಾರದು. ಆಗಿಲ್ಲ ಅಂತಾ ನಾನು ಅಂದುಕೊಳ್ತೇನೆ ಆಗಾಗಿ ಕಾನೂನಿ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿ. ಪರಮೇಶ್ವರ್ ತಿಳಿಸಿದರು.

Exit mobile version