Site icon PowerTV

2 ತಿಂಗಳಲ್ಲಿ 5G ಸೇವೆ ಕಾರ್ಯಾರಂಭ: ಮುಕೇಶ್ ಅಂಬಾನಿ

ನವದೆಹಲಿ: ಜಿಯೋ 5G ಸೇವೆ ಇನ್ನೂಳಿದ ಎರಡು ತಿಂಗಳ ಒಳಗೆ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಜಿಯೋ 5G ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ 5G ನೆಟ್‌ವರ್ಕ್ ಆಗಲಿದೆ ಎಂದು ಜಿಯೋ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

ಮುಂಬರುವ ದೀಪಾವಳಿಯಲ್ಲಿ, ಜಿಯೋ 5 ಜಿ ಯನ್ನ ಭಾರತದ ಮೆಟ್ರೋ ನಗರಗಳಲ್ಲಿ ಕಾರ್ಯಾರಂಭ ಮಾಡಲಾಗುವುದು. ಜಿಯೋ 5G ಸೇವೆಗಳು ಪ್ರತಿಯೊಬ್ಬರಿಗೆ ಅತ್ಯುನ್ನತ ಗುಣಮಟ್ಟ ಮತ್ತು ಕೈಗೆಟುಕುವ ದರದಲ್ಲಿ ನೀಡುತ್ತದೆ ಎಂದರು.

ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ ನೂರು ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚೀನಾ ಮತ್ತು ಯುಎಸ್‌ಗಿಂತಲೂ ಭಾರತವನ್ನು ಡೇಟಾ-ಚಾಲಿತ ಆರ್ಥಿಕತೆಯಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಭಾರತದ ಉನ್ನತ ಟೆಲಿಕಾಂ ಕಂಪನಿಯು 5G ಸೇವೆಗಳನ್ನು ಹೊರತರಲು 2 ಲಕ್ಷ ಕೋಟಿ ರೂ ಬದ್ಧವಾಗಿದೆ ಎಂದು ಈ ವೇಳೆ ಮುಕೇಶ್ ಅಂಬಾನಿ ಹೇಳಿದ್ದಾರೆ.

Exit mobile version