Site icon PowerTV

ಕೆಸರಿನಲ್ಲಿ ಸಿಲುಕಿಕೊಂಡ ಕಾರು, ಫಜೀತಿಯಾದ ತಹಶೀಲ್ದಾರ್

ವಿಜಯಪುರ: ಕೆಸರುಮಯ ರಸ್ತೆಯಲ್ಲಿ ತಹಶೀಲ್ದಾರ್ ಕಾರು ಸಿಲುಕಿಕೊಂಡ ಘಟನೆಯು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದ ಕಾಲುವೆ ಬಳಿ ನಡೆದಿದೆ.

ವಿಜಯಪುರದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕಾಲುವೆ ಪಕ್ಕದ ರಸ್ತೆ ಕೆಸರುಮಯವಾಗಿತ್ತು, ಆಹಾರ ಸಚಿವ ಉಮೇಶ್ ಕತ್ತಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯ ವೀಕ್ಷಣೆಯ ವೇಳೆ ಹಿಂಬಾಲಿಸುತ್ತಿದ್ದ ತಹಶೀಲ್ದಾರ್ ಕಾರು ಕೆಸರಿನಲ್ಲಿ ಸಿಲುಕಿಕೊಂಡಿತ್ತು.

ಈ ವೇಳೆ ತಹಶೀಲ್ದಾರ್​ ಅವರ ಕಾರನ್ನು ಕೆಸರಿನಿಂದ ಹೊರ ತೆಗೆಯಲು ಸಿಬ್ಬಂದಿಗಳು ಹರಸಾಹಸಪಟ್ಟರು, ಇತರೆ ಇಲಾಖೆಗಳ ಅಧಿಕಾರಿಗಳು ಸಹ ಕತ್ತಿಯವರ ಕಾರನ್ನು ಹಿಂಬಾಲಿಸಲು ಪರದಾಡಿದ ಸನ್ನಿವೇಶ ಉಂಟಾಯಿತು.

Exit mobile version