Site icon PowerTV

ಮುನಿಸಿಕೊಂಡಿದ್ದ ಕೆ.ಹೆಚ್​ ಮುನಿಯಪ್ಪ ಮನೆಗೆ ಸುರ್ಜೇವಾಲ ಭೇಟಿಯಾಗಿ ಮಾತುಕತೆ

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಮಾಜಿ ಸಂಸದ ಕೆ.ಹೆಚ್‌ ಮುನಿಯಪ್ಪ ಕಾಂಗ್ರೆಸ್​ ಪಕ್ಷದ ಮೇಲೆ ಮುನಿಸಿಕೊಂಡಿ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೆ.ಹೆಚ್‌ ಮುನಿಯಪ್ಪ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ಇತ್ತೀಚಿಗೆ ಕೆ.ಹೆಚ್​ ಮುನಿಯಪ್ಪ ಅವರು ಸಚಿವ ಕೆ. ಸುಧಾಕರ್‌ ಜೊತೆ ಸಿಎಂ ಭೇಟಿಯಾಗಿ ಕಾಂಗ್ರೆಸ್‌ ನಾಯಕರಿಗೆ ಶಾಕ್‌ ಕೊಟ್ಟಿದ್ದರು. ಈ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ನೀಡಿ ಚರ್ಚಿದ್ದಾರೆ.

ಬಳಿಕ‌ ಮಾತನಾಡಿದ ರಣದೀಪ್ ಸುರ್ಜೇವಾಲ, ಇವರ ಮನೆ ನೋಡಬೇಕು ಅಂತ ಆಸೆಪಟ್ಟಿದ್ದೆ, ಆ ಪ್ರಕಾರ ಬಂದು ಮನೆ ನೋಡಿದ್ದೇನೆ. ಹಾಗೇ ಸಹಜವಾಗಿ ಮಾತು ಕತೆ ನಡೆಸಿದ್ದೇವೆ .ಮುನಿಯಪ್ಪಗೆ ಯಾವುದೇ ಟ್ರಬಲ್ ಇಲ್ಲ. ಅವರು ಟ್ರಬಲ್‌ಗೆ ಟ್ರಬಲ್ ಕೊಡುವಂತ ನಾಯಕ ಎಂದು ಹೇಳಿದರು.

ಎಐಸಿಸಿ ಸೂಚನೆ ಪ್ರಕಾರ ನಾನು ಇಲ್ಲಿ ಬಂದಿಲ್ಲ. ಅವರ ಕುಟುಂಬ ಸದಸ್ಯನಾಗಿ ಬಂದಿದ್ದೇನೆ ಅಷ್ಟೇ. ನನ್ನ ತಂದೆಯ ಕಾಲದಿಂದಲೂ ಅವರು ನನಗೆ ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ ಎಂದು ಹೇಳಿದರು.

Exit mobile version