Site icon PowerTV

ಸಿದ್ದರಾಮೋತ್ಸವಕ್ಕೆ ತೆರಳಿದ್ದ ವ್ಯಕ್ತಿ 25 ದಿನ ಕಳೆದರೂ ಮನೆಗೆ ಬಂದಿಲ್ಲ, ಆತಂಕದಲ್ಲಿ ಕಟುಂಬಸ್ಥರು

ಬಾಗಲಕೋಟೆ: ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿ 25 ದಿನಗಳು ಕಳೆದರೂ ಮನೆಗೆ ಬಂದಿಲ್ಲ ಎಂದು ಕುಟುಂಬಸ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಜಮಖಂಡಿ ತಾಲ್ಲೂಕಿ ಅಡಿಹುಡಿ ಗ್ರಾಮದ ಗಿರಿಮಲ್ಲ ರಾಮದಾಸ್ ಕಂಡೇಕರ್ (36) ಕಾಣೆಯಾಗಿರುವ ವ್ಯಕ್ತಿ, ಸಿದ್ದರಾಮಯ್ಯ ಅಭಿಮಾನಿಯಾಗಿರುವ ಗಿರಿಮಲ್ಲ ಮೂಲ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ, ಸಿದ್ದರಾಮಯ್ಯ ಅಭಿಮಾನಿಯಾಗಿರುವುದರಿಂದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು.

ದಾವಣಗೆರೆಯಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಆಗಸ್ಟ್ 2 ರಂದು ಅಡಿಹುಡಿಯಿಂದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದರು. ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಬಸ್ ಮೂಲಕ ಹೋಗಿದ್ದರು. ಕಾರ್ಯಕ್ರಮದ ವೇಳೆ ಗಿರಿಮಲ್ಲ ಕಾಣೆಯಾಗಿದ್ದಾರೆ.

ಕಳೆದ 25 ದಿನಗಳಿಂದ ಗಿರಮಲ್ಲನಿಗಾಗಿ ಕುಟುಂಬಸ್ತರು  ಹುಡುಕಾಡುತ್ತಿದ್ದಾರೆ. ಕಾಣೆಯಾದ ವ್ಯಕ್ತಿಗೆ ಪತ್ನಿ, ತಾಯಿ, ಮೂವರು ಮಕ್ಕಳಿರುವ ಕುಟುಂಬವಾಗಿದ್ದು,  ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆ ಹಾಗೂ ದಾವಣಗೆರೆ ಪೋಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

Exit mobile version