Site icon PowerTV

ನಮ್ಮ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಘೋಷಣೆ ಕೂಗಿದ ಸಾರ್ವಜನಿಕರು

ಚಿತ್ರದುರ್ಗ: ಮುರುಘಾ ಮಠದ ಶರಣರ ಮೇಲೆ ಲೈಂಗಿಕ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಸಂತ್ರಸ್ತೆ ಬಾಲಕಿಯರನ್ನ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಗೆ ವೈದ್ಯಕೀಯ ಪರೀಕ್ಷೆಗೆ ಕರೆದೋಯ್ಯಲಾಯಿತು.

ಚಿತ್ರದುರ್ಗ ಸಿಡಬ್ಲೂಸಿ ಕಚೇರಿ ಮೂಲಕ ಸಂತ್ರಸ್ತರ ಬಾಲಕಿಯರನ್ನ ಕರೆದೊಯ್ಯಲಾಯಿತು. ಈಗಾಗಲೇ  ಪ್ರಾಥಮಿಕವಾಗಿ ಬಾಲಕಿಯರ ಹೇಳಿಕೆಯನ್ನ ಮಹಿಳಾ ಠಾಣೆ ದಾಖಲಿಸಿಕೊಂಡಿದ್ದಾರೆ.

ಈ ವೇಳೆ ನಮ್ಮ ಮಕ್ಕಳಿಗೆ ಅನ್ಯಾಯವಾಗಿದೆ. ಹೆಣ್ಣು ಮಕ್ಕಳ ಪರ ನಾವಿದ್ದೇವೆ ಸತ್ಯ ಹೇಳಿ, ಸಿಡಬ್ಲೂಸಿ ಕಚೇರಿ ಮುಂದೆ ಘೋಷಣೆಯನ್ನ ಸಾರ್ವಜನಿಕರು ಕೂಗಿದರು.

ಜನ ಸಾಮಾನ್ಯರಿಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯನಾ, ನಿಮಗೆ ನ್ಯಾಯ ಸಿಗಬೇಕು, ನೀವು ಸತ್ಯ ಹೇಳಬೇಕು. ಸಂತ್ರಸ್ತ ಬಾಲಕಿಯರು ಪರೀಕ್ಷೆಗೆ ಹೋಗುತ್ತಿದ್ದಂತೆ ಸ್ಥಳೀಯರು ಘೋಷಣೆ ಕೂಗಿದರು.

Exit mobile version