Site icon PowerTV

ಸೆಪ್ಟೆಂಬರ್​ 2ರಂದು ಮಂಗಳೂರಿಗೆ ಮೋದಿ ಆಗಮನ : ರಸ್ತೆಗಳಿಗೆ ಡಾಂಬಾರು ಭಾಗ್ಯ

ಮಂಗಳೂರು : ಸೆ.2 ರಂದು ಮಂಗಳೂರಿಗೆ ಮೋದಿ ಆಗಮನ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ತರಾತುರಿಯಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕಳಪೆ ಕಾಮಗಾರಿ ಮತ್ತು ತರಾತುರಿ ಕಾಮಗಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿಗಳಿಗೆ ಬಿದ್ದು ಸಾಕಷ್ಟು ಜನರು ಮೃತಪಟ್ಟಿದ್ದಾರೆ.

ಪ್ರತಿನಿತ್ಯ ಅಪಘಾತದಲ್ಲಿ ಸಾಕಷ್ಟು ಜನ ಗಾಯಗೊಳ್ಳುತ್ತಿದ್ದಾರೆ. ಆಗ ರಸ್ತೆ ದುರಸ್ತಿ ಮಾಡದೇ ಇದ್ದವರು ಈಗ ಡಾಮರೀಕರಣ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಮಳೆ ಇರುವುದರಿಂದ ಈ ಡಾಂಬರ್ ನಿಲ್ಲೋದಿಲ್ಲ. ಮೋದಿ ಅವರು ವಾಪಸ್ ಆಗುತ್ತಿದ್ದಂತೆ ಡಾಂಬರ್ ಕಿತ್ತು ಬರೋ ಸಾಧ್ಯತೆ ಇದೆ. ಪ್ರಧಾನಿ ಮೋದಿಗಾಗಿ ತೇಪೆ ಕಾರ್ಯ ಹಾಕುತ್ತಿರೋದಕ್ಕೆ ಜನರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೂಳೂರುವರೆಗೂ ರಸ್ತೆ ರಿಪೇರಿ ಮಾಡಲಾಗ್ತಿದೆ. ಏರ್ಪೋರ್ಟ್ ರಸ್ತೆಯಲ್ಲಿ ತುರ್ತು ದುರಸ್ತಿ ಕಾರ್ಯ ಮಾಡಲಾಗ್ತಿದೆ. ತರಾತುರಿಯಲ್ಲಿ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಲಾಗ್ತಿದ್ದು, ರಸ್ತೆಗಳು ಕಳೆದ ಒಂದು ವರ್ಷದಿಂದ ಗುಂಡಿ ಬಿದ್ದು ಹದಗೆಟ್ಟಿವೆ ಎಂದು ಸರ್ಕಾರದ ದಿಢೀರ್​​​​ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version