Site icon PowerTV

ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕೇಸ್​ ದಾಖಲು

ಚಿತ್ರದುರ್ಗ : ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಾಗಿದ್ದು, ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಾಗಿದೆ.

ಇನ್ನು, ಕೆಲವೇ ಕ್ಷಣಗಳಲ್ಲಿ ಇಬ್ಬರು ಬಾಲಕಿಯರಿಗೆ ಮೆಡಿಕಲ್‌ ಟೆಸ್ಟ್‌ ನಡೆಯಲಿದ್ದು, ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಮೆಡಿಕಲ್‌ ಟೆಸ್ಟ್‌ ಬಳಿಕ ಸ್ಥಳ ಮಹಜರು ಮಾಡಲಿರುವ ಪೊಲೀಸರು. ಸ್ಥಳ ಮಹಜರು ಬಳಿಕ ನ್ಯಾಯಾಧೀಶರ ಎದುರು ಹಾಜರು ಸಾಧ್ಯತೆ ಇದೆ.

ಅದಲ್ಲದೇ, ಸಂತ್ರಸ್ತ ಬಾಲಕಿಯರು ಜಡ್ಜ್‌ ಬಳಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು, ವಿದ್ಯಾರ್ಥಿನಿಯರ ಹೇಳಿಕೆ ಮೇಲೆ ನಿಂತಿದೆ ಶಿವಮೂರ್ತಿ ಶರಣರ ಭವಿಷ್ಯ..! ಒಂದು ವೇಳೆ ಬಾಲಕಿಯರ ಆರೋಪ ಸಾಬೀತಾದ್ರೆ ಮುರುಘಾ ಶ್ರೀ ಬಂಧನ ಸಾಧ್ಯತೆ ಇದೆ. ಸದ್ಯ ಚಿತ್ರದುರ್ಗದ ಮುರುಘಾ ಮಠದಲ್ಲೇ ಇರುವ ಶಿವಮೂರ್ತಿ ಶರಣರು. ಶ್ರೀಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಿಂದ ಭಕ್ತರಿಗೆ ಆಘಾತ ಉಂಟಾಗಿದೆ.

Exit mobile version