Site icon PowerTV

ಕೋಲಾರದ ಬೃಹತ್ ತ್ರಿವರ್ಣ ಧ್ವಜ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೇಶವನ್ನು ಉದ್ದೇಶಿಸಿ ಮಾತನಾಡುವ ಮನ್ ಕೀ ಬಾತ್ ನ 92 ನೇ ಆವೃತ್ತಿಯಲ್ಲಿ ಕೋಲಾರದ ತ್ರಿವರ್ಣ ಧ್ವಜವನ್ನ ಕೊಂಡಾಡಿದ್ದಾರೆ.

ಇಂದು (ಆಗಸ್ಟ್​ 28) ನಡೆದ 92 ನೇ ಮನ್​ ಕೀ ಬಾತ್​ ನಲ್ಲಿ ಮಾತನಾಡಿದ ಮೋದಿ, ಕೋಲಾರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ದೇಶದಲ್ಲೇ ಅತಿದೊಡ್ಡ 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗಿತ್ತು. ಇದಕ್ಕೆ ಮೋದಿ ಶ್ಲಾಘಿಸಿದ್ದಾರೆ.

ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಮೂಡಿದ‌ ತ್ರಿವರ್ಣ ಧ್ವಜ. 204 ಅಡಿ ಉದ್ದ 630 ಅಡಿ ಅಗಲ ಇತ್ತು. ಜೊತೆಗೆ ಲಿಮ್ಕಾ‌ ದಾಖಲೆ ಸಹ ಬರೆದಿತ್ತು. ಮೋದಿ ಈ ಕುರಿತು ತಮ್ಮ‌ ಮನ್‌ ಕೀ ಬಾತ್ ನಲ್ಲಿ ಮಾತನಾಡಿದ್ದು, ಮೋದಿಯ ಶ್ಲಾಘನೆಗೆ ಸಂಸದ‌ ಎಸ್. ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಸುಮಾರು 25ಕ್ಕೂ ಹೆಚ್ಚಿನ ಕಾರ್ಮಿಕರು ಈ ಧ್ವಜ ನಿರ್ಮಾಣ ಮಾಡಿದ್ದರು.

Exit mobile version