Site icon PowerTV

ರುದ್ರ ಭೂಮಿಗಾಗಿ ರಸ್ತೆ ಮಧ್ಯೆ ಶವ ಇಟ್ಟು ಪ್ರತಿಭಟನೆ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಹೆಚ್ಚೆ ಗ್ರಾಮಸ್ಥರಿಂದ ರುದ್ರ ಭೂಮಿಗಾಗಿ ರಸ್ತೆ ಮಧ್ಯೆ ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ಮಂಜೂರಾದ ರುದ್ರ ಭೂಮಿಯ ಗಡಿಯನ್ನು ಗುರುತಿಸಿ ಶವ ಹೂಳಲು ಅವಕಾಶ ನೀಡಬೇಕೆಂದು ಹಲವು ದಿನಗಳಿಂದ ಈ ಬಗ್ಗೆ ಹತ್ತಾರು ಬಾರಿ ಮನವಿ ನೀಡಿದರೂ ಸ್ಪಂದಿಸದ ಹಿನ್ನಲೆಯಲ್ಲಿ ಸ್ಥಳೀಯಾಡಳಿತ ವಿರುದ್ಧ  ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ರುದ್ರ ಭೂಮಿಗಾಗಿ 4 ಎಕರೆ ಜಾಗವು ಮಂಜೂರಾಗಿದ್ದರೂ ಪಕ್ಕದ ಊರಿನವರು ಅತಿಕ್ರಮಣ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೆಚ್ಚೆ ಗ್ರಾಮದಲ್ಲಿ ನಿಧನರಾದವರ ಶವವನ್ನು ಸೊರಬ ಪಟ್ಟಣದ ಮುಖ್ಯ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟನೆ ಮಾಡಲಾಯಿತು. ತದ ನಂತರ ಶವವನ್ನು ತಂದು ತಾಲೂಕು ಕಛೇರಿ ಮುಂಭಾಗ ತರಲಾಯಿತು.

Exit mobile version