Site icon PowerTV

ಚಿರತೆ ಹಿಡಿಯಲು ಹನಿಟ್ರ್ಯಾಪ್​ ಮೊರೆ ಹೋದ ಅರಣ್ಯ ಅಧಿಕಾರಿಗಳು

ಬೆಳಗಾವಿ: ಬೆಳಗಾವಿಯಲ್ಲಿ 20 ದಿನಗಳಿಂದ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಹಿಡಿಯಲು ‘ಹನಿಟ್ರ್ಯಾಪ್​’ ಅಸ್ತ್ರ ಬಳಸಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ಅದಕ್ಕಾಗಿ 9 ಬೋನ್​ಗಳನ್ನು ಇಟ್ಟು ಅದಕ್ಕೆ ಹೆಣ್ಣು ಚಿರತೆಗಳ ಮೂತ್ರವನ್ನು ಸಿಂಪಡಿಸಲಾಗಿದೆ. 2 ಆನೆ, 180 ಅರಣ್ಯ ಸಿಬ್ಬಂದಿ, 8 ಶಾರ್ಪ್ ಶೂಟರ್​ಗಳನ್ನೊಳಗೊಂಡು ಬೃಹತ್ ಕಾರ್ಯಾಚರಣೆ ನಡೆಸಿದರೂ ಚಾಲಾಕಿ ಚಿರತೆ ಬಲೆಗೆ ಬೀಳುತ್ತಿಲ್ಲ. ಹೇಗಾದರೂ ಮಾಡಿ ಚಿರತೆಯನ್ನು ಸೆರೆ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಅರಣ್ಯ ಇಲಾಖೆಯ ಪ್ರಯತ್ನ ವಿಫಲವಾಗುತ್ತಲೇ ಇದೆ.

ದಿನವೂ ಒಂದಿಲ್ಲೊಂದು ಹರಸಾಹಸ ನಡೆಸಿದ್ದ ಅರಣ್ಯ ಇಲಾಖೆಗೆ ಸಕ್ರೆಬೈಲ್ ಆನೆ ತಂಡದ ಮೇಲೆ ನೀರಿಕ್ಷೆ ಹೆಚ್ಚಿತ್ತು. ಅರ್ಜುನ ಮತ್ತು ಆಲೆ ಎಂಬ ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಆದರೂ ಚಿರತೆ ಸಿಕಿಲ್ಲ. ಹಾಗಾಗಿ ಇದೀಗ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹನಿಟ್ರ್ಯಾಪ್​ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.

Exit mobile version