Site icon PowerTV

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

ಬೆಂಗಳೂರು: ಅಕ್ರಮ ನಿವೇಶನ ಪಡೆದ ಹಿನ್ನಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು ದಾಖಲಾಗಿದೆ.

ಜಿ ಕೆಟಗೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಇನ್ನೂಳಿದ ಮೂವರು ಬಿಡಿಎ ಕಮೀಷನರ್​ ರಾಜೇಶ್​ ಗೌಡ ಅವರ ಒತ್ತಡ ಹಾಕಿ ಅಕ್ರಮ ಸೈಟ್ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಆಮ್ ಆದ್ಮಿ ಪಕ್ಷದಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.

ಬಿಡಿಎ ಜಿ ಕೆಟಗರಿ ಸೈಟ್ ಹಂಚಿಕೆಯನ್ನ ಸುಪ್ರೀಂಕೋರ್ಟ್ ನಿಷೇಧಿಸಿದ್ರೂ ಕಾನೂನು ಬಾಹಿರವಾಗಿ ಆರಗ ಜ್ಞಾನೇಂದ್ರ ಸೈಟ್ ಪಡೆದಿದ್ದಾರೆ. ವಾಮಮಾರ್ಗದಲ್ಲಿ ಬಿಡಿಎ ಬದಲಿ ಸೈಟ್ ಪಡೆದಿದ್ದಾರೆ. 40% ಕಮಿಷನ್ ನ ಮತ್ತೊಂದು ರೂಪ. ಈ ಕೂಡಲೇ ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಪ್ ಒತ್ತಾಯ ಮಾಡಿತು.

ಡಿಸೆಂಬರ್ 15, 2010. ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಜಿ ವರ್ಗದ ನಿವೇಶನ ಹಂಚಿಕೆಯನ್ನು ರದ್ದುಗೊಳಿಸಿದ್ದರು. ಆಗ ಅವರು ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿದ್ದರು.

Exit mobile version