Site icon PowerTV

ಬೆಳಗಾವಿಯಲ್ಲಿ ಕಾಣಿಸಿ ಮರೆಯಾದ ಕಿಲಾಡಿ ಚಿರತೆ

ಬೆಳಗಾವಿ: ಬೆಳಗಾವಿಯಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಇಂದಿಗೆ 21ನೇ ದಿನಕ್ಕೆ ಕಾಲಿಟ್ಟಿದ್ದು, ಗಾಲ್ಫ್ ಕ್ಲಬ್ ನಲ್ಲಿ ಚಿರತೆ ಕಾಣಿಸಿ ಮರಳಿ ಮರೆಯಾಗಿದೆ.

ಬೆಳಗಾವಿಯ ಹಿಂಡಲಗಾ ಗಣಪತಿ ದೇವಾಲಯ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಅರಣ್ಯ ‌ಇಲಾಖೆಯ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಚಿರತೆ ‌ಕಾಣಿಸಿಕೊಂಡ‌ ಭಾಗದಲ್ಲಿ ಹೆಚ್ಚಿನ ಅಧಿಕಾರಿಗಳು ದೌಡಾಯಿಸಿದ್ದಾರೆ. ಹೀಗಾಗಲೇ ಈ ಭಾಗದ ಸುತ್ತಮುತ್ತ ಭಾಗದಲ್ಲಿ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದು, ಈ ರಸ್ತೆಯ ಒಂದು ಬದಿ ಬಂದ್ ಮಾಡಲಾಗಿದೆ.

ಚಿರತೆ ಹಿಡಿಯಲು ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲ್ ಶಿಬಿರದಿಂದ ಅರ್ಜುನ(20) ಮತ್ತು ಆಲೆ(14) ಎಂಬ ಆನೆಗಳು ಬಂದಿವೆ. ನಿನ್ನೆ ಮೈದಾನದ ಸುತ್ತಲೂ ಬಲೆ ಅಳವಡಿಸಲಾಗಿದೆ‌. ಸುತ್ತಲಿನ ಪ್ರದೇಶದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಅಲ್ಲಿನ ನಿವಾಸಿಗಳಿಗೆ ಹೊರಬರದಂತೆ ಕ್ರಮ ವಹಿಸಲಾಗಿದೆ.

Exit mobile version