Site icon PowerTV

ಅಬ್ಬಾ… ಕೈ ಪಂಪ್​’ನಲ್ಲಿ ನೀರಿನ ಜತೆಗೆ ಬೆಂಕಿ ಬರುತ್ತಿದೆ: ವಿಡಿಯೋ ವೈರಲ್

ಮಧ್ಯಪ್ರದೇಶ: ಮಧ್ಯಪ್ರದೇಶದ ಗ್ರಾಮಯೊಂದರ ಕೈ ಪಂಪ್ ನಲ್ಲಿ ನೀರಿನ ಜತೆಗೆ ಬೆಂಕಿ ಮೇಲೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನ ಸ್ಥಳೀಯರು ವಿಡಿಯೋ ಮಾಡಿದ್ದಾರೆ.

ಮಧ್ಯಪ್ದೇಶದ ಬಕ್ಸ್‌ವಾಹ ಗ್ರಾಮ ಪಂಚಾಯತಿ ಸಮೀಪದ ಹಳ್ಳಿಗಳಲ್ಲಿನ ಕೈ ಪಂಪ್‌ಗಳು ಕಾಲಕಾಲಕ್ಕೆ ತನ್ನಿಂದ ತಾನೇ ಬಂದ್ ಆಗುತ್ತವೆ. ಹೀಗಾಗಿ ಈ ಕೈ ಪಂಪ್​ನ್ನು ಹಾಗೇ ಬಿಟ್ಟಿದ್ದಾರೆ. ಇದನ್ನ ರಿಪೇರಿ ಮಾಡಲು ಹೊರಟಾಗ ಕೈ ಪಂಪ್‌ಗಳಲ್ಲಿ ನೀರಿನೊಂದಿಗೆ ಬೆಂಕಿಯನ್ನು ಭೂಮಿಯಿಂದ ಮೇಲೆ ಬರಲು ಪ್ರಾರಂಭಿಸಿದೆ. ಇದನ್ನ ನೋಡಿದ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.

ಕೈಪಂಪ್‌ನಲ್ಲಿ ಬೆಂಕಿ ಮತ್ತು ನೀರು ಉಗುಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಚಾರ್ ಛತ್ತರ್‌ಪುರ ಜಿಲ್ಲೆಯ ಬಕ್ಸ್‌ವಾಹ ಪಂಚಾಯತ್‌ನಿಂದ 10 ಕಿಲೋಮೀಟರ್ ದೂರದಲ್ಲಿದೆ. ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಕೈ ಪಂಪ್ ನೀರು ಮತ್ತು ಜ್ವಾಲೆ ಎರಡನ್ನೂ ಏಕಕಾಲದಲ್ಲಿ ಮೇಲೆ ಬರುವುದನ್ನ ನೋಡುಗರನ್ನು ಬೆರಗುಗೊಳಿಸುವಂತೆ ತೋರಿಸುತ್ತದೆ. ಇದನ್ನು ಟ್ವಿಟ್ಟರ್‌ನಲ್ಲಿ ಸಹ ಹಂಚಿಕೊಳ್ಳಲಾಗಿದೆ. ಈ ಅಸ್ವಾಭಾವಿಕ ದೃಶ್ಯದ ಬಗ್ಗೆ ಅಧಿಕಾರಿಗಳು, ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Exit mobile version