Site icon PowerTV

ಲೋಕಾಯುಕ್ತ ಅಂತಾ ಸಂಸ್ಥೆಯಿದೆ ದಾಖಲೆ ಇದ್ರೆ ನೀಡಲಿ: ಸಿಎಂ ಬೊಮ್ಮಾಯಿ

ಹಾವೇರಿ: ಗುತ್ತಿಗೆದಾರ ಕೆಂಪಣ್ಣ ಅವರ ಹೇಳಿಕೆ ರಾಜಕೀಯ ಪ್ರೇರಿತವಾದ ಆರೋಪವಾಗಿದೆ. ಏನಾದರೂ ದಾಖಲೆಗಳಿದ್ದರೆ ಅವರು ಕೊಡಬೇಕು. ರಾಜ್ಯದಲ್ಲಿ ಲೋಕಾಯುಕ್ತ ಅಂತ ಸಂಸ್ಥೆ ತನಿಖೆ ಮಾಡಲು ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ರಾಣೆಬೆನ್ನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ರಾಜ್ಯ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆಗೆ ಮಾತನಾಡಿದ ಸಿಎಂ, ಈ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು, ಸತ್ಯ ಹೊರಗೆ ಹೊರಬೇಕು ಹೀಗಾಗಿ ಇದಕ್ಕೆ ದಾಖಲೆ ಅಗತ್ಯ ಎಂದರು.

ಮಹ್ಮದ ಅಲಿ ಜಿನ್ನಾ ಮತ್ತು ಸಾವರ್ಕರ್ ಒಂದೇ ಎಂಬ ಕಾಂಗ್ರೆಸ್ ನ ಬಿ.ಕೆ ಹರಿಪ್ರಸಾದ ಹೇಳಿಕೆ ವಿಚಾರವಾಗಿ ಮಾತನಾಡಿ ಸಿಎಂ, ಅವರಿಗೆ ಇನ್ನೊಮ್ಮೆ ಇತಿಹಾಸ ಓದು ಅಂತಾ ಹೇಳಬೇಕು. ಅವರಿಗೆ ಯಾವಗಲೂ ಕೂಡ ಜಿನ್ನಾನೆ ಕನಸಿನಲ್ಲಿ ಕಾಣೋದು. ಜಿನ್ನಾ ಅವರು ಕಾಂಗ್ರೆಸ್ ನವರಿಗೆ ಬಹಳ ಪ್ರೀತಿ. ಯಾಕಂದ್ರೆ ದೇಶವನ್ನೆ ಒಡೆದು ಆಡಳಿತಕ್ಕೆ ಬಂದವರು. ಹೀಗಾಗಿ ಇದರ ಬಗ್ಗೆ ವಿಶ್ಲೇಷಣೆ ಮಾಡೋ ಅವಶ್ಯಕತೆಯೂ ಇಲ್ಲವೆಂದರು.

Exit mobile version